Monday, May 10, 2021
Homeಕೋವಿಡ್-19ಕೊರೊನಾ ಭೀತಿ ಹಿನ್ನೆಲೆ : ಐಪಿಎಲ್-2021 ಟಿ-20 ಟೂರ್ನಿ ರದ್ದು

ಇದೀಗ ಬಂದ ಸುದ್ದಿ

ಕೊರೊನಾ ಭೀತಿ ಹಿನ್ನೆಲೆ : ಐಪಿಎಲ್-2021 ಟಿ-20 ಟೂರ್ನಿ ರದ್ದು

ನವದೆಹಲಿ: ಈವರೆಗೆ ನಾಲ್ವರು ಆಟಗಾರರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದ್ದು, ಕೊರೊನಾ ಎರಡನೇ ಅಲೆಯ ಗಂಭೀರತೆ ಅರಿತು ಪ್ರಸಕ್ತ ಐಪಿಎಲ್ ಟೂರ್ನಿಯನ್ನು ರದ್ದು ಮಾಡಿರುವುದಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲಾ ಮಂಗಳವಾರ ತಿಳಿಸಿದ್ದಾರೆ. ​

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಅಮಿತ್​ ಮಿಶ್ರಾ ಮತ್ತು ಸನ್​ ರೈಸರ್ಸ್​ ಹೈದರಾಬಾದ್​ನ ವೃದ್ಧಿಮಾನ್​ ಸಹಾಗೆ ಕೊರೊನಾ ಸೋಂಕು ದೃಢಪಟ್ಟಿದೆ. ವೃದ್ಧಿಮನ್ ಪರೀಕ್ಷೆಯ ನಂತರ ನಿನ್ನೆಯಿಂದಲೇ ಪ್ರತ್ಯೇಕವಾಗಿದ್ದಾರೆ.

ಸೋಮವಾರವಷ್ಟೇ ಕೆಕೆಆರ್​ ತಂಡದ ವರುಣ್​ ಚಕ್ರವರ್ತಿ ಮತ್ತು ಸಂದೀಪ್​ ವಾರಿಯರ್​ಗೆ ಕರೊನಾ ದೃಢಪಟ್ಟಿದೆ. ಬಯೋಬಬಲ್​ ಒಳಗೆ ಕೊರೊನಾ ಪಾಸಿಟಿವ್​ ಆದ ಮೊದಲ ಆಟಗಾರರು ಎನಿಸಿಕೊಂಡಿದ್ದು, ಇದೇ ಕಾರಣದಿಂದ ನಿನ್ನೆ ನಡೆಯಬೇಕಿದ್ದ ಆರ್​ಸಿಬಿ ಮತ್ತು ಕೆಕೆಆರ್​ ನಡುವಿನ ಪಂದ್ಯ ರದ್ದು ಪಡಿಸಲಾಯಿತು.

ಎಲ್ಲವೂ ಸರಿಯಿದ್ದರೆ ಇಂದು ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್‌ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ, ಕೊರೊನಾ ಒಂದು ಕ್ಯಾಂಪ್​ನಿಂದ ಮತ್ತೊಂದು ಕ್ಯಾಂಪ್​ಗೆ ಸ್ಥಳಾಂತರ ಆಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಐಪಿಎಲ್​ ರದ್ದು ಮಾಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img