Tuesday, May 11, 2021
Homeಸುದ್ದಿ ಜಾಲಸ್ಯಾಂಡಲ್ ವುಡ್ ಯುವ ನಿರ್ದೇಶಕ ನವೀನ್ ಕೋವಿಡ್ 19 ಸೋಂಕಿಗೆ ಬಲಿ

ಇದೀಗ ಬಂದ ಸುದ್ದಿ

ಸ್ಯಾಂಡಲ್ ವುಡ್ ಯುವ ನಿರ್ದೇಶಕ ನವೀನ್ ಕೋವಿಡ್ 19 ಸೋಂಕಿಗೆ ಬಲಿ

ಬೆಂಗಳೂರು: ಸ್ಯಾಂಡಲ್ ವುಡ್ ಯುವ ನಿರ್ದೇಶಕ ನವೀನ್ ಕೋವಿಡ್ 19 ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. 36 ವರ್ಷದ ನವೀನ್ ಅವರಿಗೆ ಕೆಲ ದಿನಗಳ ಹಿಂದೆ ಸೋಂಕು ದೃಢವಾಗಿತ್ತು.

ಮಂಡ್ಯ ಮೂಲದ ನವೀನ್ 2011ರಲ್ಲಿ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ್ದರು. ನಟರಾದ ಅಪ್ಪು ವೆಂಕಟೇಶ್ ಮತ್ತು ರೇವಣ್ಣ ಮುಖ್ಯಭೂಮಿಕೆಯಲ್ಲಿದ್ದ ‘ಒನ್ ಡೇ’ ಚಿತ್ರವನ್ನು ನವೀನ್ ನಿರ್ದೇಶನ ಮಾಡಿದ್ದರು.

ಸ್ಯಾಂಡಲ್ ವುಡ್ ಗೆ ಕೋವಿಡ್ ತನ್ನ ಕರಾಳ ಛಾಯೆಯನ್ನು ವಿಸ್ತರಿಸಿದೆ. ಕೆಲ ದಿನಗಳ ಹಿಂದಷ್ಟೇ ನಿರ್ಮಾಪಕರಾದ ರಾಜಶೇಖರ್, ಚಂದ್ರಶೇಖರ್ ಅವರೂ ಕೋವಿಡ್ ಸೋಂಕಿನ ಕಾರಣದಿಂದ ಕೊನೆಯುಸಿರೆಳೆದಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img