Monday, May 10, 2021
Homeಅಂತರ್ ರಾಷ್ಟ್ರೀಯಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್

ಇದೀಗ ಬಂದ ಸುದ್ದಿ

ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್

ಶ್ರೀನಗರ : ಕೆಲವು ದಿನಗಳ ಹಿಂದೆಯಷ್ಟೇ ಭಾರತದೊಂದಿಗೆ ನಾವಿದ್ದೇವೆ ಎಂದು ಸರಣಿ ಟ್ವೀಟ್ ಗಳ ಮೂಲಕ ಆಶ್ವಾಸನೆ ನೀಡಿದ ಪಾಕಿಸ್ತಾನ ಇದೀಗ ಗಡಿಯಲ್ಲಿ ಕ್ಯಾತೆ ತೆಗೆದಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ .

ಜಮ್ಮು ಕಾಶ್ಮೀರದ ಸಾಂಬಾ ವಲಯದಲ್ಲಿ ಪಾಕಿಸ್ತಾನ ಭಾರತದ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ . ಫೆಬ್ರವರಿ 24 ರಂದು ಉಭಯ ದೇಶಗಳ ಮಧ್ಯೆ ಕದನ ವಿರಾಮ ಒಪ್ಪಂದ ಏರ್ಪಟ್ಟ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ಒಪ್ಪಂದವನ್ನು ಉಲ್ಲಂಘಿಸಿದೆ . ಸಾಂಬಾ ವಲಯದಲ್ಲಿ ಮುಂಜಾನೆ ಆರು ಗಂಟೆಗೆ ಪಾಕಿಸ್ತಾನ ದುಸ್ಸಾಹಸ ನಡೆಸಿದ್ದು , ಅದಕ್ಕೆ ಸೂಕ್ತ ಉತ್ತರ ಭಾರತದಿಂದ ನೀಡಲಾಗಿದೆ .

2020 ರಲ್ಲಿ ಪಾಕಿಸ್ತಾನ 5133 ಬಾರಿ ಕದನ ವಿರಾಮ ಉಲ್ಲಂಘಿಸಿತ್ತು . ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಭಾರತದ 46 ವೀರ ಯೋಧರು ಹುತಾತ್ಮರಾಗಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img