Monday, May 10, 2021
Homeಸುದ್ದಿ ಜಾಲಪತ್ರಕರ್ತರನ್ನ 'ಮುಂಚೂಣಿ ಕಾರ್ಯಕರ್ತರು' ಎಂದ ಮಧ್ಯಪ್ರದೇಶ ಸರ್ಕಾರ

ಇದೀಗ ಬಂದ ಸುದ್ದಿ

ಪತ್ರಕರ್ತರನ್ನ ‘ಮುಂಚೂಣಿ ಕಾರ್ಯಕರ್ತರು’ ಎಂದ ಮಧ್ಯಪ್ರದೇಶ ಸರ್ಕಾರ

 ಭೋಪಾಲ್ : ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ, ಮಧ್ಯಪ್ರದೇಶ ಸೋಮವಾರ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಮಾಧ್ಯಮ ವೃತ್ತಿಪರರನ್ನ ‘ಮುಂಚೂಣಿ ಕಾರ್ಮಿಕರು’ ಎಂದು ಘೋಷಿಸಿದೆ.

ಈ ಘೋಷಣೆ ಮಾಡುವಾಗ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾನ್ ಅವರು, ‘ಕೋವಿಡ್-19 ಸಾಂಕ್ರಾಮಿಕ ರೋಗದ ಅಪಾಯಕಾರಿ ಅವಧಿಯಲ್ಲಿ’ ಪತ್ರಕರ್ತರು ತಮ್ಮ ಕರ್ತವ್ಯವನ್ನ ಮಾಡುವಾಗ ತಮ್ಮ ಜೀವವನ್ನು ಪಣಕ್ಕಿಟ್ಟಿದ್ದಾರೆ’ ಎಂದು ಹೇಳಿದರು.

7ನೇ ಸಿಪಿಸಿ ಮ್ಯಾಟ್ರಿಕ್ಸ್: ಡಿಒಪಿಟಿ, ಹಣಕಾಸು ಸಚಿವಾಲಯ ಮತ್ತು ಜೆಸಿಎಂ ಜಂಟಿ ಸಭೆಯನ್ನ 2021ರ ಮೇ 8ರಂದು ನಿಗದಿಪಡಿಸಲಾಗಿತ್ತು. ಆದ್ರೆ, ಕೋವಿಡ್-19 ಬಿಕ್ಕಟ್ಟಿನಿಂದಾಗಿ ಸಭೆಯನ್ನ 2021ರ ಮೇ ಕೊನೆಯ ವಾರಕ್ಕೆ ವಿಸ್ತರಿಸಲಾಗಿದೆ.

ಇನ್ನು ‘ನಾವು ಎಲ್ಲಾ ಮಾನ್ಯತೆ ಪಡೆದ ಪತ್ರಕರ್ತರನ್ನು ಮಧ್ಯಪ್ರದೇಶದಲ್ಲಿ ಮುಂಚೂಣಿ ಕಾರ್ಯಕರ್ತರೆಂದು ಘೋಷಿಸಲು ನಿರ್ಧರಿಸಿದ್ದೇವೆ. ಅವರನ್ನು ನೋಡಿಕೊಳ್ಳಲಾಗುತ್ತದೆ’ ಎಂದು ಚೌಹಾನ್ ಅವರು ಮುಖ್ಯಮಂತ್ರಿ ಕಚೇರಿಯ ಟ್ವಿಟರ್ ಹ್ಯಾಂಡಲ್ʼನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, ಸುಮಾರು 4,000 ಪತ್ರಕರ್ತರು ಪ್ರಸ್ತುತ ರಾಜ್ಯ ಸರ್ಕಾರದಿಂದ ಮಾನ್ಯತೆ ಹೊಂದಿದ್ದಾರೆ. ಇನ್ನು ಈ ಪ್ರಕಟಣೆಗೆ ಸಂಬಂಧಿಸಿದಂತೆ ಇತರ ವಿಧಾನಗಳ ಬಗ್ಗೆ ರಾಜ್ಯ ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ಅಧಿಕಾರಿ ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img