Monday, May 10, 2021
Homeಸುದ್ದಿ ಜಾಲರೆಮ್ ಡೇಸಿವಿ ಚುಚ್ಚುಮದ್ದಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದವರ ಬಂಧನ

ಇದೀಗ ಬಂದ ಸುದ್ದಿ

ರೆಮ್ ಡೇಸಿವಿ ಚುಚ್ಚುಮದ್ದಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದವರ ಬಂಧನ

ಕಲಬುರಗಿ  : ರೆಮ್‌ಡೇಸಿವಿ‌ ಚುಚ್ಚುಮದ್ದಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದವರನ್ನ ಇಂದು  ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ನಗರದ ಶಹಾಬಾದ ರಿಂಗ್ ರೋಡ ಸರ್ಕಲ ಹತ್ತಿರ ರೆಮ್‌ಡೇಸಿವಿಲ್ ಚುಚ್ಚುಮದ್ದಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.  ನಗರದ ಸಂತೋಷ ಕಾಲೋನಿ ಖಾದರಿ ಚೌಕ ನಿವಾಸಿಯಾದ 26ವರ್ಷದ ಮಹಾಂತೇಶ ತಂದೆ ಬಸಯ್ಯ ಮಠಪತಿ,  ಇನ್ನೋರ್ವ ಕಲಬುರಗಿ ತಾಲೂಕಿನ ಸಣ್ಣೂರ ಗ್ರಾಮದ  22ವರ್ಷದ ಸಾಜೀದ ತಂದೆ ಇಮಾಮದಾಬ ಕೂಡಿ. ಇಬ್ಬರು ನಗರದ ನವಜೀವನ ಬ್ಲಡ್ ಬ್ಯಾಂಕದಲ್ಲಿ ಕೆಲಸಮಾಡುತ್ತಿದ್ದರು.

ಇವರು ಕೋವಿಡ್ -19 ಪಾಸಿಟಿವ್ ರೋಗಿಗೆ ಕೊಡುವ ರೆಮ್‌ಡೇಸಿವಿ‌ ಎಂಬ ಚುಚ್ಚುಮದ್ದಗಳನ್ನು ಯಾವುದೇ ಪರವಾನಗಿ ಇಲ್ಲದೇ ಶಹಾಬಾದ ರೋಡಿಗೆ ಇರುವ ಮಾರುತಿ ಹಾಸ್ಪಿಟಲದವರಾದ ಪಂಚಶೀಲಾ ಗಂಡ ಶಿವಾನಂದ ಸಿಂದೆ ಇವರಿಂದ ನಿಗದಿ ಪಡಿಸಿದ ದರ 4,000 ರೂ ಇದ್ದು , ಅದನ್ನು 22,000 ರೂ ಗೆ ಒಂದರಂತೆ ಸರಕಾರದಿಂದ ಯಾವುದೇ ಅನುಮತಿ ಪಡೆಯದೇ ಕಾಳ ಸಂತೆಯಲ್ಲಿ ಕೋವಿಡ್ -19 ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಸಾರ್ವಜನಿಕರಿಗೆ ಮೋಸ್, ವಂಚನೆ ಮಾಡಿ ಮಾರುತ್ತಿದ್ದಾಗ ಅವರ ಮೇಲೆ ದಾಳಿ ಮಾಡಿ ಅವರಿಂದ 5 ರೆಮ್ಡೇಸಿವಿ‌ ಬಾಟಲಿಗಳು ಒಂದರ ಬೆಲೆ 4000 ಹೀಗೆ ಒಟ್ಟು 20,000 ರೂ , ಒಂದು ದ್ವಿಚಕ್ರ ವಾಹನ , 20,000 ರೂಪಾಯಿ ಎರಡು ಮೊಬೈಲಗಳು ಜಪ್ತಿ ಮಾಡಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img