Monday, May 10, 2021
Homeಸುದ್ದಿ ಜಾಲಜುಲೈವರೆಗೂ ಕೋವಿಡ್ ಲಸಿಕೆ ಅಭಾವ ಮುಂದುವರೆಯಲಿದೆ: ಸಿರಮ್ ಮುಖ್ಯಸ್ಥ

ಇದೀಗ ಬಂದ ಸುದ್ದಿ

ಜುಲೈವರೆಗೂ ಕೋವಿಡ್ ಲಸಿಕೆ ಅಭಾವ ಮುಂದುವರೆಯಲಿದೆ: ಸಿರಮ್ ಮುಖ್ಯಸ್ಥ

ಪುಣೆ: ದೇಶದಲ್ಲಿ ಒಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನೊಂದೆಡೆ ಕೋವಿಡ್ ಲಸಿಕೆ ಕೊರತೆ ಆರಭವಾಗಿದೆ. ಈ ತಿಂಗಳಾಂತ್ಯಕ್ಕೆ ಲಸಿಕೆ ಲಭ್ಯವಾಗಲಿದೆ ಎಂದು ಹೇಳಲಾಗಿತ್ತು. ಆದರೀಗ ಇನ್ನೂ ಎರಡು ತಿಂಗಳ ಕಾಲ ಲಸಿಕೆ ಕೊರತೆ ಮುಂದುವರೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜುಲೈ ತಿಂಗಳವರೆಗೂ ಕೊರೊನಾ ಲಸಿಕೆ ಕೊರತೆ ದೇಶದಲ್ಲಿ ಮುಂದುವರೆಯಲಿದೆ ಎಂದು ಪುಣೆಯ ಸಿರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಧಾರ್ ಪೂನಾವಾಲಾ ತಿಳಿಸಿದ್ದಾರೆ.

ದೇಶದಲ್ಲಿ ಜುಲೈ ತಿಂಗಳಲ್ಲಿ ಕೋವಿಡ್ ಲಸಿಕೆ ಉತ್ಪಾದನೆ 6-7 ಕೋಟಿ ಡೋಸ್ ನಿಂದ 10 ಕೊಟಿವರೆಗೆ ಏರಿಸಲಾಗುವುದು ಎಂದು ಪೂನಾವಾಲಾ ಹೇಳಿದ್ದಾರೆ ಎಂದು ವರದಿ ತಿಳಿಸಿದೆ. ಭಾರತದಲ್ಲಿ ಸೋಂಕು ಕಡಿಮೆಯಾಗಿದೆ ಎಂದೇ ಭಾವಿಸಿದ್ದೆವು. ಆದರೆ ಏಕಾಏಕಿ ಎರಡನೇ ಅಲೆ ಆರಂಭವಾಗಿದ್ದರಿಂದ ಇದೀಗ ಒಂದು ವರ್ಷದಲ್ಲಿ ಒಂದು ಶತಕೋಟಿಗೂ ಅಧಿಕ ಡೋಸ್ ಉತ್ಪಾದಿಸಬೇಕಾದ ಅಗತ್ಯ ಎದುರಾಗಿದೆ. ಹೀಗಾಗಿ ಲಸಿಕೆ ಉತ್ಪಾದನೆಗೆ ಜುಲೈವರೆಗೆ ಸಮಯದ ಅಗತ್ಯವಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img