Monday, May 10, 2021
Homeಸುದ್ದಿ ಜಾಲಏರ್ ಇಂಡಿಯಾದ ಅಮೃತಸರ-ರೋಮ್ ವಿಮಾನದಲ್ಲಿ ತೆರಳಿದ 30 ಮಂದಿಗೆ ಕೊರೊನಾ ಪಾಸಿಟಿವ್

ಇದೀಗ ಬಂದ ಸುದ್ದಿ

ಏರ್ ಇಂಡಿಯಾದ ಅಮೃತಸರ-ರೋಮ್ ವಿಮಾನದಲ್ಲಿ ತೆರಳಿದ 30 ಮಂದಿಗೆ ಕೊರೊನಾ ಪಾಸಿಟಿವ್

ನವದೆಹಲಿ: ಕಳೆದ ಬುಧವಾರ ಏರ್ ಇಂಡಿಯಾದ ಅಮೃತಸರ-ರೋಮ್ ವಿಮಾನದಲ್ಲಿ ಆಗಮಿಸಿದಾಗ ಕನಿಷ್ಠ 30 ಜನರಿಗೆ ಕೋವಿಡ್-19 ಪಾಸಿಟಿವ್ ಆಗಿದೆ ಎಂದು ವಾಯುಯಾನ ಉದ್ಯಮದ ಮೂಲಗಳು ಸೋಮವಾರ ತಿಳಿಸಿವೆ.

30 ಜನರಲ್ಲಿ ಕನಿಷ್ಠ ಇಬ್ಬರು ವಿಮಾನ ಸಿಬ್ಬಂದಿ ಸದಸ್ಯರಾಗಿದ್ದಾರೆ ಎಂದು ಅವರು ಹೇಳಿದ್ದು, ಕೋವಿಡ್ ಪಾಸಿಟಿವ್ ಎಂದು ಪತ್ತೆಯಾದವರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 242 ಜನರನ್ನ ಇಟಲಿ ಸರ್ಕಾರ ಕ್ವಾರಂಟೈನ್ʼಗೆ ಒಳಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಗುರುವಾರ, ಅಮೃತಸರ-ರೋಮ್ ವಿಮಾನ ಇಳಿಯುವ ಕೆಲವು ಗಂಟೆಗಳ ಮೊದಲು, ಇಟಲಿ ಸರ್ಕಾರ ಆದೇಶ ವೊಂದನ್ನು ಹೊರಡಿಸಿ, ಭಾರತದಿಂದ ಬರುವ ಎಲ್ಲಾ ಪ್ರಯಾಣಿಕರನ್ನ ಅದರ ಅಧಿಕಾರಿಗಳು ನಿರ್ಧರಿಸಿದ ಸ್ಥಳದಲ್ಲಿ 10 ದಿನಗಳ ಕಾಲ ಕ್ವಾರಂಟೈನ್ʼಗೆ ಒಳಪಡಿಸಲಾಗುವುದು ಎಂದು ತಿಳಿಸಿತು.

ಹಲವಾರು ರಾಜ್ಯಗಳ ಆಸ್ಪತ್ರೆಗಳು ಔಷಧಗಳು, ಆಮ್ಲಜನಕ ಮತ್ತು ಹಾಸಿಗೆಗಳ ತೀವ್ರ ಕೊರತೆಯಿಂದ ತತ್ತರಿಸುತ್ತಿರುವುದರಿಂದ ಕೊರೊನಾ ವೈರಸ್ ಸಾಂಕ್ರಾಮಿಕದ 2ನೇ ಅಲೆಯೊಂದಿಗೆ ಭಾರತ ಹೆಣಗಾಡುತ್ತಿದೆ.

ದೇಶದಲ್ಲಿ ದೈನಂದಿನ ಕೋವಿಡ್-19 ಪ್ರಕರಣಗಳ ಸಂಖ್ಯೆ ಸೋಮವಾರ ಸ್ವಲ್ಪ ಇಳಿಮುಖವಾಗಿದ್ದು, 24 ಗಂಟೆಗಳಲ್ಲಿ 3,68,147 ಹೊಸ ಸೋಂಕುಗಳು ವರದಿಯಾಗಿವೆ. ಆರೋಗ್ಯ ಸಚಿವಾಲಯದ ಪ್ರಕಾರ ದೇಶದ ಒಟ್ಟು ಕೇಸ್ ಲೋಡ್ 1,99,25,604 ಆಗಿದೆ.

ವೈರಲ್ ಕಾಯಿಲೆಯಿಂದ ಸತ್ತವರ ಸಂಖ್ಯೆ 2,18,959ಕ್ಕೆ ಏರಿದೆ ಮತ್ತು 3,417ಕ್ಕೂ ಹೆಚ್ಚು ಸಾವುನೋವುಗಳು ಸಂಭವಿಸಿವೆ ಎಂದು ಅದು ಹೇಳಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img