Tuesday, May 11, 2021
Homeಸುದ್ದಿ ಜಾಲ'ಚುನಾವಣಾ ತಂತ್ರಗಾರಿಕೆ'ಗೆ ಗುಡ್ ಬೈ ಹೇಳಿದ 'ಪ್ರಶಾಂತ್ ಕಿಶೋರ್'

ಇದೀಗ ಬಂದ ಸುದ್ದಿ

‘ಚುನಾವಣಾ ತಂತ್ರಗಾರಿಕೆ’ಗೆ ಗುಡ್ ಬೈ ಹೇಳಿದ ‘ಪ್ರಶಾಂತ್ ಕಿಶೋರ್’

ಪಶ್ಚಿಮ ಬಂಗಾಳ : ರಾಜಕೀಯ ತಜ್ಞ ಹಾಗೂ ಅಭಿನವ ಚಾಣಕ್ಯ ಪ್ರಶಾಂತ್ ಕಿಶೋರ್ ರಾಜಕೀಯ ತಂತ್ರಗಾರಿಕೆ ಕಾರ್ಯಕ್ಕೆ ಗುಡ್ ಬೈ ಹೇಳಿದ್ದಾರೆ.

ಇಂದು ಪ್ರಕಟಗೊಂಡ ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣೆಯ ಫಲಿತಾಂಶದಲ್ಲಿ ಟಿಎಂಸಿ ಪಕ್ಷಕ್ಕೆ ಅಭೂತಪೂರ್ವ ಗೆಲುವು ಲಭಿಸಿದೆ. ಈ ಚುನಾವಣೆಯಲ್ಲಿ ಪ್ರಶಾಂತ್ ಅವರು ಟಿಎಂಸಿ ಪರವಾಗಿ ಕೆಲಸ ಮಾಡಿದ್ದಾರೆ. ಬಂಗಾಳದಲ್ಲಿ ದೀದಿ ಗೆಲುವಿಗೆ ರಣತಂತ್ರ ಹೆಣೆದ ಪ್ರಶಾಂತ್, ಇದೀಗ ಚುನಾವಣಾ ತಂತ್ರಗಾರಿಕೆಗೆ ಖಾಯಂ ಆಗಿ ಫುಲ್ ಸ್ಟಾಪ್ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆಗೆ ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಈ ಬಗ್ಗೆ ಮಾತನಾಡಿದ್ದ ಪ್ರಶಾಂತ್, ಒಂದು ವೇಳೆ ಬಿಜೆಪಿ 100 ಸ್ಥಾನಗಳನ್ನು ಗೆದ್ದರೆ ನಾನು ರಾಜಕೀಯ ತಂತ್ರಗಾರಿಕೆಯಿಂದ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದರು. ಇಂದು ಪ್ರಕಟಗೊಂಡಿರುವ ಫಲಿತಾಂಶದಲ್ಲಿ ಬಿಜೆಪಿ 100 ಸ್ಥಾನಗಳಲ್ಲಿ ಪಡೆದಿಲ್ಲ. ಅದಾಗ್ಯೂ ಕೂಡ ಪ್ರಶಾಂತ್ ಅವರು ನಿವೃತ್ತಿ ಘೋಷಿಸಿದ್ದಾರೆ.

ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ತಮ್ಮ ನಿಲುವು ಪ್ರಕಟಿಸಿರುವ ಪ್ರಶಾಂತ್ ಅವರು, ಈ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು ಗೆಲ್ಲುತ್ತೆ, ನೀವು ನಿವೃತ್ತಿ ನೀಡಬೇಕಾಗುತ್ತದೆ ಎಂದು ಕೆಲವರು ನನ್ನನ್ನು ಟ್ರೋಲ್ ಮಾಡಿದ್ದರು. ಆದರೆ, ಅಂತಿಮವಾಗಿ ನಮ್ಮ ಪಕ್ಷ ( ಟಿಎಂಸಿ) ಗೆಲುವು ಪಡೆದಿದೆ. ಬಿಜೆಪಿ ನೂರು ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿದೆ. ನಾನು ಕೆಲಸ ಮಾಡಿದ ಪಕ್ಷ ಗೆಲುವು ಪಡೆದರೂ ಕೂಡ ನಿವೃತ್ತಿ ಪಡೆಯುತ್ತಿದ್ದೇನೆ ಎಂದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img