Tuesday, May 11, 2021
Homeಸುದ್ದಿ ಜಾಲಕೊರೋನ ಸಂಕಷ್ಟಕ್ಕೆ ಅಂಬುಲೆನ್ಸ್ ವಾಹನ ವನ್ನು ಕೊಡುಗೆ ನೀಡಿದ ಚಿದಾನಂದ್ ಎಂ ಗೌಡ.

ಇದೀಗ ಬಂದ ಸುದ್ದಿ

ಕೊರೋನ ಸಂಕಷ್ಟಕ್ಕೆ ಅಂಬುಲೆನ್ಸ್ ವಾಹನ ವನ್ನು ಕೊಡುಗೆ ನೀಡಿದ ಚಿದಾನಂದ್ ಎಂ ಗೌಡ.

ಶಿರಾ ತಾಲ್ಲೂಕಿನ ಸುಮಾರು 35 ರಿಂದ 40 ಹಳ್ಳಿಗಳಿಗೆ ಸಂಬಂಧಪಟ್ಟಂತೆ ಪಟ್ಟನಾಯಕನಹಳ್ಳಿ ಯಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು ಇಲ್ಲಿ ಅಂಬುಲೆನ್ಸ್ ವ್ಯವಸ್ಥೆ ಇಲ್ಲದೆ  ಬೈಕ್ ನಲ್ಲಿಯೇ ಅಸ್ವಸ್ಥ ರೋಗಿಯನ್ನು ಕರೆತಂದ ಹಿನ್ನೆಲೆಯಲ್ಲಿ

ವಿಧಾನ ಪರಿಷತ್ ಶಾಸಕ ಚಿದಾನಂದ್ ಎಂ ಗೌಡ ರವರು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಕುಶಲೋಪರಿ ವಿಚಾರಿಸುತ್ತಿದ್ದ ಸಂದರ್ಭದಲ್ಲಿ ಆಸ್ಪತ್ರೆಗೆ ಬೈಕ್ ನಲ್ಲಿಯೇ ಅಸ್ವಸ್ಥ ರೋಗಿಯನ್ನು ಕರೆತರುವ ದೃಶ್ಯ ಕಂಡು ವಿಚಾರಿಸಿದಾಗ ಸುಮಾರು 35 ರಿಂದ 40 ಹಳ್ಳಿಗಳಿಗೆ ಸಂಬಂಧಪಟ್ಟಂತೆ ಪಟ್ಟನಾಯಕನಹಳ್ಳಿ ಯಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು ಇಲ್ಲಿ ಅಂಬುಲೆನ್ಸ್ ವ್ಯವಸ್ಥೆ ಇರುವುದಿಲ್ಲ ಮತ್ತು ಇದಕ್ಕೆ ಸಂಬಂಧಪಟ್ಟಂತೆ ಆಂಬುಲೆನ್ಸ್ ಬೇಡಿಕೆ ಇದೆ ಎಂದು *ಸುಮಾರು ಹತ್ತು ವರ್ಷಗಳಿಂದ ತಿಳಿಸುತ್ತಾ ಬಂದಿದ್ದರು ಸಹ ಇದುವರೆಗೂ  ಸ್ಪಂದಿಸಿಲ್ಲ ಎಂದು ನೆರೆದಿದ್ದಂತಹ ಸಾರ್ವಜನಿಕರು ವಿಷಯ ತಿಳಿದರು.

 ಹಿನ್ನೆಲೆಯಲ್ಲಿ ಜನರ ಕಷ್ಟ ಅರಿತ  ವಿಧಾನ ಪರಿಷತ್ ಶಾಸಕ  ತುರ್ತು ಸೇವೆಗೆ ಆಂಬುಲೆನ್ಸ್ ಅಗತ್ಯವಾಗಿದ್ದು, ಅದರಲ್ಲೂ ಈ ಕೋವಿಡ್ ಸಂಕಷ್ಟದಲ್ಲಿ ಅತಿ ಅಗತ್ಯವಾದ ತುರ್ತು ಸೇವೆಗೆ ಬೇಕಾದಂತ ಆಂಬುಲೆನ್ಸ್ ನೀಡುವುದಾಗಿ ತಿಳಿಸಿದ್ದರು.

ನಂತರ ಕಾರ್ಯಪ್ರವೃತ್ತರಾದ ಚಿದಾನಂದ್ ಗೌಡ್ರು ಇಂತಹ ಕೋವಿಡ್ ಸಂದರ್ಭದಲ್ಲಿ ಗ್ರಾಮಗಳ ಜನರ ಕಷ್ಟ ಗಳನ್ನು ಅರಿತು, ಸುಮಾರು ಹತ್ತಾರು ವರ್ಷಗಳ ಬೇಡಿಕೆಯಾಗಿದ್ದ ಅಂಬುಲೆನ್ಸ್ ಅನ್ನು ಕೇವಲ ನಾಲ್ಕು ದಿನದಲ್ಲಿಯೇ ರೆಡಿ ಮಾಡಿಸಿ ತಮ್ಮ ಸ್ವಂತ ಕರ್ಚಿನಲ್ಲಿ ಸುಮಾರು 15 ಲಕ್ಷ ರೂಪಾಯಿಗಳ ಮೌಲ್ಯದ ಸುಸರ್ಜಿತ ವಾದ ಆಂಬುಲೆನ್ಸ್ ನ್ನು ಇಂದು  ತಾಲ್ಲೂಕಿನ ಪಟ್ಟನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅರ್ಪಿಸಿದರು. ತಾಲ್ಲೂಕಿನಲ್ಲಿ ತನದೆ ಅದ ಶಿಕ್ಷಣ ಸಂಸ್ಥೆಯ ಮೂಲಕ

ಗುಣಮಟ್ಟದ ಜೀವನ, ಪರಿಸರ ಹಾಗೂ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಮೂಲಕ ಸಾಮಾಜ ಮುಖಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ತೆಂಗಿನ ನಾರು ನಿಗಮ ಮಂಡಳಿ ಅಧ್ಯಕ್ಷರಾದ  ಬಿ.ಕೆ ಮಂಜುನಾಥ್,

ತಹಸೀಲ್ದಾರ್ ಶ್ರೀಮತಿ ಮಮತಾ ರವರು ಬಿಡುಗಡೆ ಮಾಡಿದರು. , ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ರಂಗನಾಥ್ ರವರು, ಡಾ.ಪುರುಷೋತ್ತಮ್ ರವರು, ಡಾ.ನಾಗರಾಜಪ್ಪ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಲಕ್ಷ್ಮಣ್ ಮತ್ತಿತರ ಉಪಸ್ಥಿತರಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img