Monday, May 10, 2021
Homeಅಂತರ್ ರಾಷ್ಟ್ರೀಯಭಾರತದ ಕೊರೋನಾ ವಿರುದ್ಧ ಹೋರಾಟಕ್ಕೆ ಅಮೆರಿಕಾ, ಫ್ರಾನ್ಸ್,ರಷ್ಯಾ ನಿಂದ ನೆರವು

ಇದೀಗ ಬಂದ ಸುದ್ದಿ

ಭಾರತದ ಕೊರೋನಾ ವಿರುದ್ಧ ಹೋರಾಟಕ್ಕೆ ಅಮೆರಿಕಾ, ಫ್ರಾನ್ಸ್,ರಷ್ಯಾ ನಿಂದ ನೆರವು

ನವದೆಹಲಿ: ಭಾರತದ ಕೊರೊನಾ ವಿರುದ್ಧದ ಹೋರಾಟಕ್ಕೆ ಅಮೆರಿಕಾ, ಫ್ರಾನ್ಸ್​, ಜರ್ಮನಿ, ರಷ್ಯಾ ದೇಶಗಳು ನೆರವಿನ ಹಸ್ತ ಚಾಚಿದ್ದಾರೆ. ಈಗಾಗಲೇ ಯುಎಸ್‌ಎಯಿಂದ 1,000 ಆಮ್ಲಜನಕ ಸಿಲಿಂಡರ್‌ಗಳು, ರೆಗ್ಯುಲೇಟರ್​ ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಹೊತ್ತ ವಿಮಾನವು ಶನಿವಾರ ರಾತ್ರಿ ಭಾರತಕ್ಕೆ ಬಂದಿಳಿದಿದೆ.

‘ಯುಎಸ್​ನ​ ಸಹಕಾರ ಮುಂದುವರೆದಿದೆ. ಯುಎಸ್‌ಎಯಿಂದ ಮತ್ತೊಂದು ವಿಮಾನವು 1000ಕ್ಕೂ ಹೆಚ್ಚು ಆಮ್ಲಜನಕ ಸಿಲಿಂಡರ್​ಗಳು, ರೆಗ್ಯುಲೇಟರ್ ಮತ್ತು ಇತರ ವೈದ್ಯಕೀಯ ಉಪಕರಣಗಳು ಆಗಮಿಸಿವೆ , ಬೆಂಬಲಕ್ಕಾಗಿ ಕೃತಜ್ಞತೆಗಳು’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ಇನ್ನು ಫ್ರಾನ್ಸ್​ ಕೂಡ ಭಾರತಕ್ಕೆ ಸಹಾಯ ಮಾಡುವ ಉದ್ದೇಶದಿಂದ ‘ಐಕಮತ್ಯ ಮಿಷನ್’ನ ಭಾಗವಾಗಿ ಎಂಟು ದೊಡ್ಡ ಆಮ್ಲಜನಕ ಉತ್ಪಾದನಾ ಘಟಕಗಳು ಸೇರಿದಂತೆ 28 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಲಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img