Monday, May 10, 2021
Homeಅಂತರ್ ರಾಜ್ಯಪ.ಬಂಗಾಳ: ಮತ ಎಣಿಕೆ ಕೇಂದ್ರದಲ್ಲಿ ಕುಸಿದು ಬಿದ್ದ ಅಭ್ಯರ್ಥಿಯ ಏಜೆಂಟ್

ಇದೀಗ ಬಂದ ಸುದ್ದಿ

ಪ.ಬಂಗಾಳ: ಮತ ಎಣಿಕೆ ಕೇಂದ್ರದಲ್ಲಿ ಕುಸಿದು ಬಿದ್ದ ಅಭ್ಯರ್ಥಿಯ ಏಜೆಂಟ್

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಅಭ್ಯರ್ಥಿಯ ಏಜೆಂಟ್ ಒಬ್ಬರು ಮತ ಎಣಿಕೆ ಕೇಂದ್ರದಲ್ಲಿ ಕುಸಿದುಬಿದ್ದಿರುವ ಘಟನೆ ಉತ್ತರ 24 ಪರಗಣಾಸ್ ಜಿಲ್ಲೆಯಲ್ಲಿ ವರದಿಯಾಗಿದೆ.

ಪಣಿಹತಿ ಕಾಂಗ್ರೆಸ್ ಅಭ್ಯರ್ಥಿ ತಪಸ್ ಮಜುಮ್ದಾರ್ ಅವರ ಏಜೆಂಟ್ ಗೋಪಾಲ್ ಸೋಮ್ ಮತ ಎಣಿಕೆ ಕೇಂದ್ರದಲ್ಲಿ ಕುಸಿದು ಬಿದ್ದಿದ್ದು ಆತಂಕ ಮೂಡಿಸಿತ್ತು.

ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 5 ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಪಶ್ಚಿಮ ಬಂಗಾಳದಲ್ಲಿ ಇತ್ತೀಚಿನ ವರದಿಯ ಪ್ರಕಾರ ಒಟ್ಟು 294 ಸ್ಥಾನಗಳ ಪೈಕಿ ಟಿಎಂಸಿ-150 ರಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 123, ಕಾಂಗ್ರೆಸ್ 5, ಇತರರು 2 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img