Tuesday, May 11, 2021
Homeಸುದ್ದಿ ಜಾಲಕೊರೋನಾದಿಂದಾಗಿ ದೇಶದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಲು ಪ್ರಧಾನಿ ನೇರ ಕಾರಣ : ರಾಹುಲ್ ಗಾಂಧಿ

ಇದೀಗ ಬಂದ ಸುದ್ದಿ

ಕೊರೋನಾದಿಂದಾಗಿ ದೇಶದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಲು ಪ್ರಧಾನಿ ನೇರ ಕಾರಣ : ರಾಹುಲ್ ಗಾಂಧಿ

ನವದೆಹಲಿ: ಕೊರೋನಾ ಕುರಿತು ವಿಜ್ಞಾನಿಗಳ ಸೂಚನೆ ಸೇರಿದಂತೆ ಆರಂಭಿಕ ಎಚ್ಚರಿಕೆಗಳನ್ನು ಸರ್ಕಾರ ಕಡೆಗಣಿಸಿದ್ದೇ ಇಂದಿನ ಹದಗೆಟ್ಟ ಸ್ಥಿತಿಗೆ ಕಾರಣ, ಇದಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

‘ಪ್ರತಿದಿನ ಬೆಳಿಗ್ಗೆ ಎದ್ದಕೂಡಲೇ ಸಾವುನೋವಿನ ಸುದ್ದಿಗಳೇ ಕೇಳಿಬರುತ್ತಿವೆ. ಇದು ಅಲೆಯಲ್ಲ, ಸುನಾಮಿ. ಆಮ್ಲಜನಕ ಸಿಲಿಂಡರ್ ಪಡೆಯಲು, ಸಿಲಿಂಡರ್ ಭರ್ತಿ ಮಾಡಿಸಲು, ಜೀವರಕ್ಷಣ ಔಷಧ ಖರೀದಿಸಲು, ಆಸ್ಪತ್ರೆಯಲ್ಲಿ ಹಾಸಿಗೆಯನ್ನು ಪಡೆಯಲು, ಸ್ಮಶಾನಗಳಲ್ಲಿ ಹೆಣಗಳನ್ನು ಸುಡಲು ಜನರು ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ. ಭಾರತದ ಈ ಪರಿಸ್ಥಿತಿ ಕಂಡು ಇಡೀ ಜಗತ್ತು ಗಾಬರಿಗೊಂಡಿದೆ ಎಂದರು.

‘ಎಚ್ಚರಿಕೆಯನ್ನು ಪರಿಗಣಿಸಿದ್ದರೆ ನಾವು ಇನ್ನಷ್ಟು ಸಜ್ಜಾಗಬಹುದಿತ್ತು. ಈಗ ಸರ್ಕಾರ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದೆ. ಈ ಸ್ಥಿತಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಕಾರಣ. ಅವರು ತಮ್ಮ ವರ್ಚಸ್ಸು ಹೆಚ್ಚಿಸುವ ಕೆಲಸಗಳನ್ನಷ್ಟೇ ಮಾಡುತ್ತಾರೆ. ಮುಂದಾಗಬಹುದಾದ ಅವಘಡ ಎದುರಿಸಲು ಸಿದ್ಧರಾಗುವಂತೆ ಸರ್ಕಾರಕ್ಕೆ 2020ರಲ್ಲೇ ಸಲಹೆ ನೀಡಿದ್ದರೂ, ನಿರ್ಲಕ್ಷ್ಯ ಮುಂದುವರಿಯಿತು ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಕೋವಿಡ್ ವಿರುದ್ಧ ಸರ್ಕಾರ ಜಯ ಸಾಧಿಸಿದೆ ಎಂದು ಬಣ್ಣಿಸಿದ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿತು. ಸ್ವತಃ ಪ್ರಧಾನಿಯವರೂ ಕೋವಿಡ್ ಯುದ್ಧದಲ್ಲಿ ಗೆದ್ದಿದ್ದೇವೆ ಎಂದರು. ಆದರೆ ಅದು ಎರಡನೇ ಅಲೆಯ ಆರಂಭವಾಗಿತ್ತು. ಅದಕ್ಕೆ ಸಿದ್ಧತೆ ಮಾಡಿಕೊಳ್ಳುವ ಬದಲು ಸಂಭ್ರಮಿಸಿದರು ಎಂದು ಕಿಡಿ ಕಾರಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img