Tuesday, May 18, 2021
Homeಸುದ್ದಿ ಜಾಲಕೊರೋನಾ ನಿಯಂತ್ರಣಕ್ಕೆ ಕಠಿಣ ಲಾಕ್ ಡೌನ್ ಅಗತ್ಯವಿದೆ : ಏಮ್ಸ್ ಮುಖ್ಯಸ್ಥ

ಇದೀಗ ಬಂದ ಸುದ್ದಿ

ಕೊರೋನಾ ನಿಯಂತ್ರಣಕ್ಕೆ ಕಠಿಣ ಲಾಕ್ ಡೌನ್ ಅಗತ್ಯವಿದೆ : ಏಮ್ಸ್ ಮುಖ್ಯಸ್ಥ

ನವದೆಹಲಿ: ಕೊರೋನಾ ಅಟ್ಟಹಾಸ ಮುಂದುವರೆದಿದ್ದು, 2ನೇ ಅಲೆಯನ್ನು ತಡೆಗಟ್ಟಲು ಕಳೆದ ವರ್ಷ ಮಾರ್ಚ್ ನಲ್ಲಿ ವಿಧಿಸಲಾಗಿದ್ದ ಮಾದರಿಯಲ್ಲೇ ಆಕ್ರಮಣಕಾರಿ ಲಾಕ್ಡೌನ್ ಜಾರಿ ಮಾಡಬೇಕು ಎಂದು ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.

ದೇಶಾದ್ಯಂತ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿ ಮಾಡಬೇಕು ಎಂದು ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತದ ಆರೋಗ್ಯ ಮೂಲಸೌಕರ್ಯಕ್ಕೆ ಮಿತಿ ಇದೆ, ಹಾಗಾಗಿ ಎರಡನೇ ಕೊರೋನಾ ಅಲೆಯನ್ನು ತಡೆಗಟ್ಟಲು ಕಳೆದ ವರ್ಷ ಮಾರ್ಚ್ ನಲ್ಲಿ ವಿಧಿಸಿದ ಲಾಕ್ ಡೌನ್ ನಂತೆ ಈ ಬಾರಿಯೂ ಆಕ್ರಮಣಕಾರಿ ಲಾಕ್ಡೌನ್ ವಿಧಿಸಬೇಕು ಎಂದಿದ್ದಾರೆ.

ಸೋಂಕು ಪ್ರಕರಣಗಳಿರುವ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ ಗಳನ್ನು ಜಾರಿಗೆ ತರಬೇಕು. ಹೆಚ್ಚಾಗುತ್ತಿರುವ ಸೋಂಕು ಪ್ರಮಾಣವನ್ನು ತಗ್ಗಿಸಲು ನಾವು ಆಕ್ರಮಣಕಾರಿಯಾಗಿ ಕೆಲಸ ಮಾಡಬೇಕಾಗಿದೆ. ವಿಶ್ವದ ಯಾವುದೇ ಆರೋಗ್ಯ ವ್ಯವಸ್ಥೆಯು ಈ ರೀತಿಯ ಹೊರೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img