Tuesday, May 18, 2021
Homeಸುದ್ದಿ ಜಾಲಬಿಹಾರ: ಬಿಜೆಪಿ MLC ಹರಿ ನಾರಾಯಣ ಚೌಧರಿ ಕೋವಿಡ್‍ಗೆ ಬಲಿ

ಇದೀಗ ಬಂದ ಸುದ್ದಿ

ಬಿಹಾರ: ಬಿಜೆಪಿ MLC ಹರಿ ನಾರಾಯಣ ಚೌಧರಿ ಕೋವಿಡ್‍ಗೆ ಬಲಿ

ಪಾಟ್ನಾ: ಬಿಹಾರ ಬಿಜೆಪಿ ಎಂಎಲ್ಸಿ ಹರಿ ನಾರಾಯಣ್ ಚೌಧರಿ ಮಹಾಮಾರಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಕೋವಿಡ್ ಪಾಸಿಟಿವ್ ಸೋಂಕು ದೃಢ ಪಟ್ಟಿದ್ದರಿಂದ 1 ವಾರದ ಹಿಂದೆ ಇಂದಿರಾಗಾಂಧಿ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಬಿಹಾರ ವಿಧಾನ ಪರಿಷತ್ ಸಭಾಧ್ಯಕ್ಷ ಅವದೇಶ್ ನರೈನ್ ಸಿಂಗ್ ಹೇಳಿದ್ದಾರೆ.

77 ವರ್ಷದ ಚೌಧರಿ 2015 ರಲ್ಲಿ ಸಮಸ್ತಿಪುರ ಸ್ಥಳೀಯ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇನ್ನು ನಾರಾಯಣ ಅವರ ನಿಧನಕ್ಕೆ ಸಿಎಂ ನಿತೀಶ್ ಕುಮಾರ್ ಕೂಡ ಸಂತಾಪ ಸೂಚಿಸಿದ್ದಾರೆ.

ಚೌಧರಿ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂರು ಪುತ್ರಿಯರನ್ನು ಅಗಲಿದ್ದಾರೆ. ಸರ್ಕಾರದ ಸಕಲ ಗೌರವಗಳೊಂದಿಗೆ ಮುಕ್ತಿಧಾಮದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img