Monday, May 10, 2021
Homeಸುದ್ದಿ ಜಾಲಇಡೀ ದೇಶವನ್ನು ಕೆಲ ವಾರಗಳವರಗೆ ಲಾಕ್ ಮಾಡಿ : ಅಮೇರಿಕಾದ ವೈದ್ಯಾಧಿಕಾರಿ ಎಸ್ ಫೌಸಿ...

ಇದೀಗ ಬಂದ ಸುದ್ದಿ

ಇಡೀ ದೇಶವನ್ನು ಕೆಲ ವಾರಗಳವರಗೆ ಲಾಕ್ ಮಾಡಿ : ಅಮೇರಿಕಾದ ವೈದ್ಯಾಧಿಕಾರಿ ಎಸ್ ಫೌಸಿ ಭಾರತಕ್ಕೆ ಸಲಹೆ

ಭಾರತ ಕೊರೊನಾ ಆರ್ಭಟಕ್ಕೆ ಹಿಂದೆಂದಿಗಿಂತಲೂ ಹೆಚ್ಚು ತತ್ತರಿಸಿ ಹೋಗಿದೆ. ಕಳೆದ ವರ್ಷ ಅಮೇರಿಕಾದಲ್ಲಿ ಕೂಡಾ ಕೋವಿಡ್ ಪರಿಸ್ಥಿತಿ ಬಹಳ ಹದಗೆಟ್ಟಿತ್ತು. ಆದ್ರೆ ಈಗ ಅಲ್ಲಿ ಬಹಳಷ್ಟು ಸುಧಾರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಸದ್ಯದ ಸಮಸ್ಯೆಯಿಂದ ಹೊರಬರಲು ಏನು ಮಾಡಿದ್ರೆ ಒಳ್ಳೆಯದು, ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ಅಮೇರಿಕಾದ ವೈದ್ಯಕೀಯ ಸಲಹೆಗಾರ ಡಾ ಆಂಟನಿ ಎಸ್ ಫೌಸಿ ವಿವರವಾದ ಸಲಹೆಗಳನ್ನು ನೀಡಿದ್ದಾರೆ.

ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿರುವ ಡಾ ಫೌಸಿ ಭಾರತ ಈಗಿರುವ ಪರಿಸ್ಥಿತಿಯಲ್ಲೇ ಹಿಂದೆ ಅಮೇರಿಕಾ ಕೂಡಾ ಇತ್ತು. ಆದ್ರೆ ಕೆಲವೊಂದಷ್ಟು ಕಠಿಣ ಮತ್ತು ತುರ್ತು ನಿಯಮಗಳಿಂದಾಗಿ ನಾವು ಪರಿಸ್ಥಿತಿ ಸುಧಾರಿಸಿದೆವು ಎಂದಿದ್ದಾರೆ. ಭಾರತದಲ್ಲಿ ಒಟ್ಟಾರೆ ಪೂರ್ಣ ಲಸಿಕೆ ಪಡೆದವರ ಪ್ರಮಾಣ ಕೇವಲ ಶೇಕಡಾ 2ರಷ್ಟಿದೆ. ಇದು ಬಹಳ ಕಡಿಮೆಯಾಯ್ತು. ಆದ್ರೆ ಈಗ ಆದ್ಯತೆ ಕೊಡಬೇಕಾಗಿರುವುದು ಚಿಕಿತ್ಸೆಗೆ, ವೇಗವಾಗಿ ಹೇಗೆ ಜನರಿಗೆ ಸೌಕರ್ಯಗಳನ್ನು ತಲುಪಿಸಬಹುದು ಎನ್ನುವುದರ ಬಗ್ಗೆ ಹೆಚ್ಚಿನ ಆದ್ಯತೆ ಕೊಡಬೇಕು. ಅಗತ್ಯ ಬಿದ್ದಲ್ಲಿ ಯಾವುದೇ ಗುಂಪಿನ ಜನರನ್ನು ಬಳಕೆ ಮಾಡಿಕೊಳ್ಳಬೇಕು. ಉದಾಹರಣೆಗೆ ಅಮೇರಿಕಾದಲ್ಲಿ ಸ್ಥಳೀಯ ರಕ್ಷಣಾ ಪಡೆಯ ಯೋಧರನ್ನು ಲಸಿಕೆ ನೀಡುವಲ್ಲಿ ದೊಡ್ಡ ಮಟ್ಟದಲ್ಲಿ ಬಳಸಿಕೊಂಡಿದ್ದೇವೆ. ಹಾಗಾಗಿ ಇಡೀ ರಾಷ್ಟ್ರದ bಹುತೇಕ ಹಿರಿಯರ ಲಸಿಕೆ ಆಗಿಹೋಗಿದೆ. ಒಟ್ಟಾರೆ ಜನಸಂಖ್ಯೆಯ ಶೇಕಡಾ 40-50ರಷ್ಟು ಅಮೇರಿಕನ್ನರಿಗೆ ಲಸಿಕೆ ನೀಡಿದ್ದೇವೆ ಎಂದರು.

ಲಸಿಕೆ ದೀರ್ಘಕಾಲಿಕವಾಗಿ ಪ್ರಯೋಜನಕ್ಕೆ ಬರುತ್ತದೆ, ನಿಜ. ಆದ್ರೆ ಭಾರತಕ್ಕೆ ಈಗ ಅತ್ಯಗತ್ಯವಾಗಿ ಬೇಕಾಗಿರುವುದು ಆಸ್ಪತ್ರೆ, ಔಷಧ, ಆಕ್ಸಿಜನ್ ಇಂಥವು. ಅನೇಕ ದೇಶಗಳಿಗೆ ಸಮಸ್ಯೆಗಳು ಎದುರಾದಾಗೆಲ್ಲಾ ಭಾರತ ಅವುಗಳ ಬೆಂಬಲಕ್ಕೆ ನಿಂತಿದೆ. ಈಗ ಆ ದೇಶಗಳೆಲ್ಲಾ ಧಾರಾಳವಾಗಿ ಭಾರತಕ್ಕೆ ತಮ್ಮ ಬೆಂಬಲ ಕೊಡುತ್ತಿವೆ. ಮೊದಲಿಗೆ ಒಂದು ಕೇಂದ್ರೀಕೃತ ವ್ಯವಸ್ಥೆ ಜಾರಿಯಾಗಬೇಕು. ಇದರಿಂದ ನಾಗರಿಕೆ ಸವಲತ್ತುಗಳು ನಿರ್ದಿಷ್ಟವಾಗಿ ಮತ್ತು ತುರ್ತಾಗಿ ಸಿಗುವಂತಾಗಬೇಕು.

 ಚೀನೀಯರು ಕಳೆದ ವರ್ಷ ಕೊರೊನಾ ಸ್ಫೋಟವಾದಾಗ ರಾತ್ರೋರಾತ್ರಿ ಸೂಪರ್​​ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿದ್ದರಲ್ಲಾ? ಅಂಥಾ ವ್ಯವಸ್ಥೆ ಈಗ ಭಾರತಕ್ಕೆ ಅವಶ್ಯಕತೆ ಇದೆ. ಸೇನೆಯಲ್ಲಿ ಬಳಸುವ ತಾತ್ಕಾಲಿಕ ವೈದ್ಯಕೀಯ ಟೆಂಟ್​ಗಳಾದರೂ ಆದೀತು. ಜನರಿಗೆ ಕೂಡಲೇ ಚಿಕಿತ್ಸೆ ಕೊಡುವ ವ್ಯವಸ್ಥೆ ಮೊದಲಾಗಬೇಕು ಎಂದರು ಡಾ ಫೌಸಿ.

ಲಾಕ್​ ಡೌನ್ ವೈರಸ್ ಹರಡುವುದನ್ನು ತಡೆಯಲು ಬಹುದೊಡ್ಡ ಅಸ್ತ್ರ. ಆರು ತಿಂಗಳು ಲಾಕ್​ ಡೌನ್ ಆದ್ರೆ ದೇಶದ ಆರ್ಥಿಕತೆಗೆ ಸಮಸ್ಯೆ ಉಂಟಾಗುತ್ತದೆ. ಅಷ್ಟೊಂದು ಬೇಕಿಲ್ಲ. ಈಗ ಕೆಲವು ವಾರಗಳವರಗೆ ಲಾಕ್ ಡೌನ್ ವಿಧಿಸಬೇಕಾಗುತ್ತದೆ. ಪ್ರತಿಯೊಬ್ಬರೂ ಒಬ್ಬರ ಬೆಂಬಲಕ್ಕೆ ಮತ್ತೊಬ್ಬರು ನಿಲ್ಲಬೇಕು. ಅಗತ್ಯ ವೈದ್ಯಕೀಯ ಸಹಾಯ ದೊರೆಯಬೇಕು. ಒಮ್ಮೆ ಸೋಂಕು ಹತೋಟಿಯಲ್ಲಿ ಇದೆ ಎಂದರೆ ನಂತರ ದೊಡ್ಡ ಪ್ರಮಾಣದಲ್ಲಿ ಲಸಿಕೆಗಳ ವಿತರಣೆ ಆಗಬೇಕು.
ಇದೆಲ್ಲವೂ ಸಮರೋಪಾದಿಯಲ್ಲಿ ಆಗಬೇಕು. ಭಾರತದ ಜನಸಂಖ್ಯೆ ದೊಡ್ಡದಿದೆ. ಹಾಗಾಗಿ ಸಮಸ್ಯೆಯೂ ದೊಡ್ಡದೇ. ಅಲ್ಲದೇ ವೈರಸ್ ವಿರುದ್ಧದ ಈ ಹೋರಾಟವನ್ನು ಕೂಡಾ ನಾವು ಯುದ್ಧದಂತೆಯೇ ಭಾವಿಸಿ ಅದರಂತೆಯೇ ಹೋರಾಡಬೇಕು. ಸರ್ಕಾರ, ಖಾಸಗಿ ಸಂಸ್ಥೆಗಳು, ಜನ ಪ್ರತಿಯೊಬ್ಬರೂ ಜೊತೆಯಾಗಿ ನಿಂತು ಹೋರಾಡಿದರೆ ವೈರಸ್ ವಿರುದ್ಧದ ಗೆಲುವು ಅಷ್ಟೇನೂ ಕಷ್ಟಕರವಾಗಲಾರದು. ಇರುವ ಸೋಂಕು ತಡೆಗಟ್ಟುವುದರೊಂದಿಗೆ ಹೊಸಾ ಸೋಂಕು ಉಂಟಾಗದಂತೆಯೂ ತಡೆಯುವ ಗುರುತರ ಜವಾಬ್ದಾರಿ ಭಾರತದ ಮೇಲಿದೆ ಎಂದು ಡಾ ಫೌಸಿ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img