Monday, May 10, 2021
Homeಸುದ್ದಿ ಜಾಲSBIನಿಂದ ಗೃಹ ಸಾಲ ಪಡೆದಿದ್ದವರಿಗೆ ಗುಡ್ ನ್ಯೂಸ್

ಇದೀಗ ಬಂದ ಸುದ್ದಿ

SBIನಿಂದ ಗೃಹ ಸಾಲ ಪಡೆದಿದ್ದವರಿಗೆ ಗುಡ್ ನ್ಯೂಸ್

ನವದೆಹಲಿ : ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಗೃಹ ಸಾಲದ ಬಡ್ಡಿ ದರಗಳನ್ನು ಕಡಿತಗೊಳಿಸಿದೆ. ಈಗ ಶೇ.6.70 ರಿಂದ ಪ್ರಾರಂಭವಾಗುವ ಗೃಹ ಸಾಲಗಳ ಮೇಲೆ ವಿಶೇಷ ಬಡ್ಡಿ ದರಗಳನ್ನು ನೀಡುತ್ತಿದೆ.

ಈ ಕುರಿತಂತೆ ರಿಟೈಲ್ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಎಂಡಿ ಆಗಿರುವಂತ ಸಿಎಸ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದು, ದೇಶದ ಬಹುದೊಡ್ಡ ಬ್ಯಾಂಕ್ ಆಗಿರುವಂತ ಎಸ್ ಬಿಐ ಗ್ರಾಹಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಗೃಹ ಸಾಲದ ಮೇಲಿನ ಬಡ್ಡಿಯನ್ನು ಇಳಿಕೆಗೆ ಮುಂದಾಗಿದೆ. ಈ ಮೂಲಕ ಗ್ರಾಹಕರನ್ನು ಸೆಳೆಯುವಂತ ಪ್ರಯತ್ನಕ್ಕೆ ಇಳಿದಿದೆ. ಇದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತೇಜನ ಕೂಡ ನೀಡಲಿದೆ ಎಂದಿದ್ದಾರೆ.

ಅಂದಹಾಗೇ, ಎಸ್ ಬಿಐ ಗೃಹ ಸಾಲದ ಬಡ್ಡಿ ದರಗಳು ರೂ. 30 ಲಕ್ಷದವರೆಗೆ ಸಾಲಗಳಿಗೆ 6.70% ಮತ್ತು ರೂ. 30 ಲಕ್ಷಮತ್ತು 75 ಲಕ್ಷದವರೆಗೆ ಸಾಲಗಳಿಗೆ 6.95% ನಿಂದ ಪ್ರಾರಂಭವಾಗುತ್ತವೆ. 75 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಸಾಲಗಳಿಗೆ 7.05%ರ ಬಡ್ಡಿ ದರದಲ್ಲಿ ಗೃಹ ಸಾಲಗಳನ್ನು ನೀಡುತ್ತಿದೆ.

ಇನ್ನೂ ಮಹಿಳೆಯರಿಗಾಗಿ ವಿಶೇಷ 5 ಬಿಪಿಎಸ್ ರಿಯಾಯಿತಿಯಲ್ಲಿ ಸಾಲ ಸೌಲಭ್ಯ ನೀಡುತ್ತಿದೆ. ಗ್ರಾಹಕರು 5 ಬಿಪಿಎಸ್ ಹೆಚ್ಚುವರಿ ಬಡ್ಡಿ ರಿಯಾಯಿತಿಯನ್ನು ಗಳಿಸಲು ಯೋನೊ ಆಯಪ್ ಮೂಲಕ ತಮ್ಮ ಮನೆಯಲ್ಲೇ ಸುಲಭದಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img