Monday, May 10, 2021
Homeಕೋವಿಡ್-19ನಟ ಬಿಕ್ರಮ್​ಜೀತ್​ ಕನ್ವರ್​​ಪಾಲ್ ಕರೊನಾಗೆ ಬಲಿ

ಇದೀಗ ಬಂದ ಸುದ್ದಿ

ನಟ ಬಿಕ್ರಮ್​ಜೀತ್​ ಕನ್ವರ್​​ಪಾಲ್ ಕರೊನಾಗೆ ಬಲಿ

ಮುಂಬೈ: ಮಾಜಿ ಸೇನಾಧಿಕಾರಿ ಮತ್ತು ನಟ ಬಿಕ್ರಮ್​ಜೀತ್ ಕನ್ವರ್​ಪಾಲ್​ ಅವರು ಕರೊನಾದಿಂದಾಗಿ ಸಾವಪ್ಪಿದ್ದಾರೆ. ವೆಬ್​​ ಧಾರಾವಾಹಿ ಸ್ಪೆಷಲ್ ಆಪ್ಸ್​​​​ನ ಖ್ಯಾತಿಯ ಕನ್ವರ್​ಪಾಲ್, ಹಲವಾರು ಹಿಂದಿ ಚಿತ್ರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದರು. ಅವರಿ​​ಗೆ 52 ವರ್ಷ ವಯಸ್ಸಾಗಿತ್ತು.

ಚಿತ್ರ ನಿರ್ಮಾಪಕ ವಿಕ್ರಮ್​ ಭಟ್​ ಅವರು, ‘ಮೇಜರ್​ ಕನ್ವರ್​ಲಾಲ್ ಅವರನ್ನು ಕ್ರೂರ ಸಾಂಕ್ರಾಮಿಕವು ನಮ್ಮಿಂದ ದೂರ ಮಾಡಿದೆ’ ಎಂದು ಇನ್ಸ್​​ಟಾಗ್ರಾಮ್​ನಲ್ಲಿ ತಿಳಿಸಿ ಸಂತಾಪ ಸೂಚಿಸಿದ್ದಾರೆ. ರಿಚಾ ಚಡ್ಡಾ, ನೀಲ್ ನಿತಿನ್ ಮುಖೇಶ್, ಅಶೋಕ್​ ಪಂಡಿತ್​ ಸೇರಿದಂತೆ ಸಿನಿಮಾ ರಂಗದ ಹಲವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಸೇನೆಯಲ್ಲಿ ಮೇಜರ್ ಆಗಿದ್ದ ಬಿಕ್ರಮ್​ಜೀತ್ ಕನ್ವರ್​ಪಾಲ್ ಅವರು ನಿವೃತ್ತರಾದ ಮೇಲೆ 2003 ರಲ್ಲಿ ನಟನೆ ಆರಂಭಿಸಿದ್ದರು. ಪೇಜ್ 3, ರಾಕೆಟ್​ ಸಿಂಗ್: ಸೇಲ್ಸ್​ಮನ್ ಆಫ್ ದ ಇಯರ್, ಆರಕ್ಸಣ್​, ಮರ್ಡರ್​ 2, ಟು ಸ್ಟೇಟ್ಸ್, ದ ಘಾಜಿ ಅಟ್ಯಾಕ್, ಕ್ರಿಯೇಚರ್ 3ಡಿ, ಹಾರರ್ ಸ್ಟೋರಿ, ಬೈಪಾಸ್​​ ರೋಡ್​ ಮುಂತಾದ ಚಲನಚಿತ್ರಗಳಲ್ಲಿ ಅವರು ನಟಿಸಿದ್ದರು. ದಿಯಾ ಔರ್ ಬಾತಿ ಹಮ್, ಏ ಹೇ ಚಾಹತೇ, ದಿಲ್ ಹಿ ತೊ ಹೇ ಮತ್ತು ನಟ ಅನಿಲ್​ ಕಪೂರ್​​​ ಅವರ 24 ಟಿವಿ ಧಾರಾವಾಹಿಗಳಲ್ಲೂ ನಟಿಸಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img