Tuesday, May 11, 2021
Homeಸುದ್ದಿ ಜಾಲ130 ಕೋಟಿ ಜನರನ್ನು ಹೊತ್ತ ಹಡಗು ಮುಳುಗುತ್ತಿದೆ : ಪಿ.ಚಿದಂಬರಂ

ಇದೀಗ ಬಂದ ಸುದ್ದಿ

130 ಕೋಟಿ ಜನರನ್ನು ಹೊತ್ತ ಹಡಗು ಮುಳುಗುತ್ತಿದೆ : ಪಿ.ಚಿದಂಬರಂ

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ 130 ಕೋಟಿ ಜನರನ್ನು ಹೊತ್ತ ಹಡಗು ಮುಳುಗುತ್ತಿದೆ ಎಂದಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಅವರ ಟ್ವೀಟ್ ಪ್ರತಿಕ್ರಿಯೆ ನೀಡಿದ ಚಿದಂಬರಂ ಪ್ರಸ್ತುತ ಆರೋಗ್ಯ ಸಚಿವರ ಟ್ವೀಟ್​ ಡಿಲೀಟ್​ ಆಗಿದೆ. ‘ ಮೇ ದಿನ! ಮೇ ದಿನ! 130 ಕೋಟಿ ಜನರನ್ನು ಹೊತ್ತ ಹಡಗು 2021ರಲ್ಲಿ ಮುಳುಗುತ್ತಿದೆ. ನಮ್ಮನ್ನು ರಕ್ಷಿಸಿ, ಕನಿಷ್ಠಪಕ್ಷ ನನ್ನನ್ನಾದರೂ ಉಳಿಸಿ’ ಎಂದು ಬರೆದುಕೊಂಡಿದ್ದಾರೆ.

ಭಾರತದಲ್ಲಿ ಕೊರೋನಾ ಹೆಚ್ಚುತ್ತಿದ್ದು, ಕಳೆದ 24 ಗಂಟೆಗಳಲ್ಲಿ 4,01,993 ಹೊಸ ಪ್ರಕರಣಗಳು ಮತ್ತು 3,523 ಸಾವು ವರದಿಯಾಗಿದೆ. ಇದರ ಜೊತೆಗೆ ದೇಶದಲ್ಲಿ ಆಸ್ಪತ್ರೆ ಬೆಡ್ ಗಳ ಕೊರತೆ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚಿದಂಬರಂ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img