Tuesday, May 11, 2021
Homeಸುದ್ದಿ ಜಾಲಆಶಾ ಕಾರ್ಯಕರ್ತೆಯರಿಗೆ 3 ತಿಂಗಳ ಸಂಬಳ ನೀಡಿದ ಶಾಸಕ 'ಗಣೇಶ್ ಹುಕ್ಕೇರಿ'

ಇದೀಗ ಬಂದ ಸುದ್ದಿ

ಆಶಾ ಕಾರ್ಯಕರ್ತೆಯರಿಗೆ 3 ತಿಂಗಳ ಸಂಬಳ ನೀಡಿದ ಶಾಸಕ ‘ಗಣೇಶ್ ಹುಕ್ಕೇರಿ’

ಬೆಳಗಾವಿ: ಕೋವಿಡ್ ಪರಿಹಾರ ನಿಧಿಗೆ ಶಾಸಕರ 1 ತಿಂಗಳ ಹಾಗೂ ಸಚಿವರ 1 ವರ್ಷದ ಸಂಬಳ ನೀಡುವಂತೆ ಸಿಎಂ ಯಡಿಯೂರಪ್ಪ ಸೂಚಿಸಿರುವ ಬೆನ್ನಲ್ಲೇ ಇದೀಗ ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ತಮ್ಮ 3 ತಿಂಗಳ ವೇತನವನ್ನು ಆಶಾ ಕಾರ್ಯಕರ್ತೆಯರಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಕೋವಿಡ್ ಪರಿಹಾರ ನಿಧಿಗೆ 1 ತಿಂಗಳ ವೇತನ ನೀಡಿರುವ ಶಾಸಕ, ತಮ್ಮ ಕ್ಷೇತ್ರದ ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ಮೂರು ತಿಂಗಳ ಸಂಬಳ ನೀಡುವುದಾಗಿ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಶಾಸಕ ಗಣೇಶ್ ಹುಕ್ಕೇರಿ, ಇಂದು ಮೇ 1 ಕಾರ್ಮಿಕ ದಿನಾಚರಣೆ. ಕೊರೊನಾ ಮಹಾಮಾರಿ ಹೊಡೆದೋಡಿಸಲು ಹಲವಾರು ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ. ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುವ ಕಾರ್ಮಿಕರಲ್ಲಿ ನಮ್ಮ ಆಶಾ ಕಾರ್ಯಕರ್ತರ ಪಾತ್ರ ಮುಖ್ಯವಾದದ್ದು. ಆರೋಗ್ಯ, ನೈರ್ಮಲ್ಯದ ಬಗ್ಗೆ ಸಮುದಾಯಕ್ಕೆ ತಿಳುವಳಿಕೆ ನೀಡುವುದರಿಂದ ಹಿಡಿದು ಕ್ಷೇತ್ರದ ನಾಗರಿಕರಿಗೆಲ್ಲರಿಗೂ ಕೊರೊನಾ ಲಸಿಕೆ ಹಾಕಿಸುವವರೆಗೂ ಹಲವಾರು ಜವಾಬ್ದಾರಿ ವಹಿಸುವ ಇವರ ಕಾರ್ಯ ಶ್ಲಾಘನೀಯ ಹೀಗಾಗಿ ಕಾರ್ಯಕರ್ತರಿಗೆ ನನ್ನ ಒಂದು ಪುಟ್ಟ ಕೊಡುಗೆ ಎಂದು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img