Tuesday, May 18, 2021
Homeಸುದ್ದಿ ಜಾಲಕೋವಿಡ್-19 : ಭಾರತಕ್ಕೆ ನೆರವು ನೀಡಲು ಸಿದ್ಧ ಎಂದ ಚೀನಾ

ಇದೀಗ ಬಂದ ಸುದ್ದಿ

ಕೋವಿಡ್-19 : ಭಾರತಕ್ಕೆ ನೆರವು ನೀಡಲು ಸಿದ್ಧ ಎಂದ ಚೀನಾ

ಬೀಜಿಂಗ್: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವು ನೀಡಲು ಸಿದ್ಧ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಂದೇಶ ಕಳುಹಿಸಿದ್ದಾರೆ.

ಭಾರತದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೋಕ ಸಂದೇಶ ಕಳುಹಿಸಿರುವ ಜಿನ್‌ಪಿಂಗ್, ನೆರವು ನೀಡಲು ಸಿದ್ಧ ಎಂದು ತಿಳಿಸಿರುವುದಾಗಿ ಚೀನಾದ ಸರ್ಕಾರಿ ಸುದ್ದಿಸಂಸ್ಥೆ ‘ಕ್ಸಿನುವಾ’ ವರದಿ ಮಾಡಿದೆ.

ಭಾರತದೊಂದಿಗೆ ಸಾಂಕ್ರಾಮಿಕದ ವಿರುದ್ಧದ ಸಹಕಾರ ಬಲಪಡಿಸಲು ಚೀನಾ ಸಿದ್ಧವಿದೆ. ಬೆಂಬಲ ಮತ್ತು ಸಹಾಯ ನೀಡಲು ಸಿದ್ಧವಿದೆ ಎಂದು ಸಂದೇಶದಲ್ಲಿ ಜಿನ್‌ಪಿಂಗ್ ತಿಳಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಹೆಚ್ಚಿನ ನೆರವನ್ನು ನೀಡಲಾಗುವುದು. ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ಚೀನಾದಲ್ಲಿ ತಯಾರಾಗುವ ಉಪಕರಣಗಳು ಬೇಗನೆ ಭಾರತ ತಲುಪಲಿವೆ ಎಂದು ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಗುರುವಾರ ಹೇಳಿದ್ದರು.

ಭಾರತ ಎದುರಿಸುತ್ತಿರುವ ಸವಾಲುಗಳಿಗೆ ಚೀನಾವು ಪ್ರಾಮಾಣಿಕ ಸಹಾನುಭೂತಿ ವ್ಯಕ್ತಪಡಿಸುತ್ತಿದೆ ಎಂದೂ ಅವರು ವಿದೇಶಾಂಬ ಸಚಿವ ಎಸ್.ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img