Tuesday, May 11, 2021
Homeಸುದ್ದಿ ಜಾಲಆಕ್ಸಿಜನ್ ಸಿಗದೇ ವೈದ್ಯ ಸೇರಿ 8 ಸೋಂಕಿತರು ಸಾವು

ಇದೀಗ ಬಂದ ಸುದ್ದಿ

ಆಕ್ಸಿಜನ್ ಸಿಗದೇ ವೈದ್ಯ ಸೇರಿ 8 ಸೋಂಕಿತರು ಸಾವು

ನವದೆಹಲಿ: ದೇಶಾದ್ಯಂತ ಕೊರೊನಾ 2ನೇ ಅಲೆ ಅಬ್ಬರ ಹೆಚ್ಚುತ್ತಿದೆ. ಈ ನಡುವೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಮುಂದುವರೆದಿದ್ದು, ಸೋಂಕಿತರು ಪ್ರಾಣವಾಯುವಿಗಾಗಿ ಪರದಾಡಿ ಸಾವನ್ನಪ್ಪುತ್ತಿದ್ದಾರೆ. ಇದೀಗ ಆಕ್ಸಿಜನ್ ಸಿಗದೇ ವೈದ್ಯ ಸೇರಿ 8 ರೋಗಿಗಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಆಸ್ಪತ್ರೆಗಳಲ್ಲಿ ಮತ್ತೆ ಆಕ್ಸಿಜನ್ ಕೊರತೆ ಆರಂಭವಾಗಿದೆ. ಇಲ್ಲಿನ ಬಾತ್ರಾ ಪ್ರಾದೇಶದಲ್ಲಿನ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದೇ ಓರ್ವ ವೈದ್ಯ ಸೇರಿ 8 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇಲ್ಲಿನ ಎರಡು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾಗಿತ್ತು. ಸರ್ ಗಂಗಾರಾಮ್ ಆಸ್ಪತ್ರೆ ಹಾಗೂ ಜೈಪುರ ಗೋಲ್ಡ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದೇ ಸೋಂಕಿತರು ಸಾವನ್ನಪ್ಪಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img