Tuesday, May 18, 2021
Homeಸುದ್ದಿ ಜಾಲಕಾರಿಗೆ ಢಿಕ್ಕಿ ಹೊಡೆದ ಬಸ್ : ಆರು ಮಂದಿ ಸ್ಥಳದಲ್ಲೇ ಸಾವು

ಇದೀಗ ಬಂದ ಸುದ್ದಿ

ಕಾರಿಗೆ ಢಿಕ್ಕಿ ಹೊಡೆದ ಬಸ್ : ಆರು ಮಂದಿ ಸ್ಥಳದಲ್ಲೇ ಸಾವು

ಬುಲಂದ್‌ಶಹರ್ : ಕಾರು ಮತ್ತು ಬಸ್​ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹಾರ್‌ನ ದಿಬಾಯ್ ಪೊಲೀಸ್ ವ್ಯಾಪ್ತಿಯಲ್ಲಿನ ಸಂಬಲ್‌ಪುರ ಗ್ರಾಮದ ಬಳಿ ಶುಕ್ರವಾರ ನಡೆದಿದೆ.

ಮೂಲಗಳ ಪ್ರಕಾರ, ದೆಹಲಿಯಿಂದ ಖಾಸಗಿ ಬಸ್ ಬರುತ್ತಿತ್ತು ಮತ್ತು ಕಾರು ಬುಲಂದ್‌ಶಹರ್ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ.ರಾಷ್ಟ್ರೀಯ ಹೆದ್ದಾರಿ 93 ರಲ್ಲಿ ಬಸ್​ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಗಾಯಗೊಂಡ ಓರ್ವ ಮಹಿಳೆಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಬುಲಂದ್‌ಶಹರ್ ಡಿಎಚ್‌ಎಚ್‌ಗೆ ಕಳುಹಿಸಲಾಗಿದೆ.

ಅಪಘಾತದ ನಂತರ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನ ವಿರುದ್ಧ ಸೆಕ್ಷನ್ 304 ಎ, 279, ಮತ್ತು 427 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img