Tuesday, May 18, 2021
Homeದೆಹಲಿನಾಳೆ ಲಸಿಕಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲಬೇಡಿ : ಸಿಎಂ ಕೇಜ್ರಿವಾಲ್

ಇದೀಗ ಬಂದ ಸುದ್ದಿ

ನಾಳೆ ಲಸಿಕಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲಬೇಡಿ : ಸಿಎಂ ಕೇಜ್ರಿವಾಲ್

 ನವದೆಹಲಿ : 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಅವಕಾಶ ಒದಗಿಸಿರುವ ಲಸಿಕಾ ಅಭಿಯಾನದ ನಾಲ್ಕನೇ ಹಂತ ನಾಳೆಯಿಂದ(ಮೇ 1) ದೇಶಾದ್ಯಂತ ಆರಂಭ ಎನ್ನಲಾಗಿದೆ. ಆದರೆ, ನಾಳೆ ಲಸಿಕಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲಬೇಡಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರಾಜಧಾನಿಯ ಜನರನ್ನು ಕೇಳಿಕೊಂಡಿದ್ದಾರೆ.

‘ಲಸಿಕೆಗಳು ನಮಗಿನ್ನೂ ಡೆಲಿವರ್ ಆಗಿಲ್ಲ. ನಾವು ಲಸಿಕೆ ಕಂಪೆನಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ನಾಳೆ ಅಥವಾ ನಾಡಿದ್ದು ಲಸಿಕೆ ತಲುಪಬಹುದು ಎಂದು ಆಶಿಸುತ್ತೇವೆ. ಮೊದಲು ಕೋವಿಶೀಲ್ಡ್​​ನ 3 ಲಕ್ಷ ಡೋಸ್​ಗಳನ್ನು ನೀಡುತ್ತಾರೆ’ ಎಂದಿರುವ ಸಿಎಂ, ಲಸಿಕೆ ಲಭ್ಯವಾದ ಕೂಡಲೇ ಜನರಿಗೆ ತಿಳಿಸಲಾಗುವುದು ಎಂದಿದ್ದಾರೆ.

‘ದಯವಿಟ್ಟು ನಾಳೆ ಲಸಿಕಾ ಕೇಂದ್ರಗಳ ಹೊರಗೆ ಸಾಲುಗಟ್ಟಿ ನಿಲ್ಲಬೇಡಿ. ಇದರಿಂದ ಕಾನೂನು ಸುವ್ಯವಸ್ಥೆಯ ಸಮಸ್ಯೆ ಉಂಟಾಗಬಹುದು. ಸಾಮಾಜಿಕ ಅಂತರ ಇಲ್ಲದಂಥ ಸನ್ನಿವೇಶವೂ ಬರಬಹುದು’ ಎಂದು ಸಿಎಂ ಹೇಳಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆಲ್ಲಾ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದಿದ್ದಾರೆ.

45 ವರ್ಷ ತುಂಬಿರುವ ಜನರಿಗೆ ಮಾತ್ರ ಕರೊನಾ ಲಸಿಕೆ ನೀಡುವ ಅವಕಾಶವಿದ್ದಾಗ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಒದಗಿಸಿ ಎಂದು ಮನವಿ ಮಾಡಿದವರಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಮೊದಲಿಗರು. ದೆಹಲಿಯಲ್ಲಿ ಸುಮಾರು 2 ಕೋಟಿ ಜನರು ವಾಸವಾಗಿದ್ದು, ಈವರೆಗೆ 31 ಲಕ್ಷ ಜನರಿಗೆ ಲಸಿಕೆಯ ಮೊದಲನೇ ಡೋಸ್​​ ನೀಡಲಾಗಿದೆ. ಕೇವಲ ಸುಮಾರು 6 ಲಕ್ಷ ಜನರಿಗೆ ಎರಡೂ ಡೋಸ್​ಗಳನ್ನು ನೀಡಲಾಗಿದೆ. ಮೇ 1 ರ ಲಸಿಕಾ ಕಾರ್ಯಕ್ರಮಕ್ಕೆ ಕೋವಿನ್​ ಆಯಪ್​ನಲ್ಲಿ ನೋಂದಣಿಯನ್ನು ಮೇ 28 ರಿಂದಲೇ ಆರಂಭಿಸಿದ್ದರೂ, ನಿರ್ದಿಷ್ಟ ಟೈಮ್​ ಸ್ಲಾಟ್​ಗಳನ್ನು ಈವರೆಗೂ ನೀಡಲಾಗಿಲ್ಲ.

‘ಲಸಿಕೆಗಳು ಬಂದ ಕೂಡಲೇ ನಾವು ಸರಿಯಾಗಿ ಘೋಷಣೆ ನೀಡುತ್ತೇವೆ. ನಂತರ ನೋಂದಣಿ ಮಾಡಿಕೊಂಡಿರುವ ಪ್ರತಿಯೊಬ್ಬರೂ ಅಪಾಯಿಂಟ್​ಮೆಂಟ್​ಗಳು ಸಿಕ್ಕ ಹಾಗೆ ಲಸಿಕೆ ಪಡೆಯಬಹುದು. ಇದರಲ್ಲಿ ನಿಮ್ಮ ಸಹಾಯ ಬೇಕು. ಮುಂದಿನ 3 ತಿಂಗಳಲ್ಲಿ ಕೋವಿಶೀಲ್ಡ್​ ಮತ್ತು ಕೋವಾಕ್ಸಿನ್ ಎರಡೂ ಲಸಿಕೆಗಳ ತಲಾ 67 ಲಕ್ಷ ಡೋಸ್​ಗಳನ್ನು ಒದಗಿಸುವಂತೆ ಆರ್ಡರ್ ನೀಡಲಾಗಿದೆ. ಎಲ್ಲರಿಗೂ ಲಸಿಕೆ ನೀಡುವುದು ನಮ್ಮ ಉದ್ದೇಶವಾಗಿದೆ. ಕಂಪೆನಿಗಳು ಲಸಿಕೆಯನ್ನು ಸಕಾಲಕ್ಕೆ ಒದಗಿಸಿದರೆ ಇದಕ್ಕೆ ನಾವು ಸಿದ್ಧರಾಗಿದ್ದೇವೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img