Monday, May 10, 2021
Homeಕೋವಿಡ್-19ಕೊರೊನಾ ಲಸಿಕೆ ಇನ್ನು ಬಂದಿಲ್ಲ, ಬಂದ ತಕ್ಷಣ ಕೊಡುತ್ತೇವೆ; ಸಿಎಂ ಬಿ.ಎಸ್.ಯಡಿಯೂರಪ್ಪ

ಇದೀಗ ಬಂದ ಸುದ್ದಿ

ಕೊರೊನಾ ಲಸಿಕೆ ಇನ್ನು ಬಂದಿಲ್ಲ, ಬಂದ ತಕ್ಷಣ ಕೊಡುತ್ತೇವೆ; ಸಿಎಂ ಬಿ.ಎಸ್.ಯಡಿಯೂರಪ್ಪ

 ಬೆಂಗಳೂರು (ಏ. 30): ಸೋಂಕಿನ ವಿರುದ್ಧ ಹೋರಾಟಕ್ಕೆ ಸಜ್ಜು ಮಾಡುವ ದೇಶದ ಬೃಹತ್​ ಲಸಿಕೆ ಅಭಿಯಾನಕ್ಕೆ ದೇಶಾದ್ಯಂತ ನಾಳೆಯಿಂದ ಚಾಲನೆ ಸಿಗಲಿದೆ. ಆದರೆ, ಕರ್ನಾಟಕ, ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಈ ಬೃಹತ್​ ಲಸಿಕೆ ಅಭಿಯಾನ ಆರಂಭಗೊಳ್ಳುವುದಿಲ್ಲ. ಇದಕ್ಕೆ ಕಾರಣ ಲಸಿಕೆ ಕೊರತೆ. ರಾಜ್ಯದಲ್ಲಿ ಲಸಿಕೆ ಕೊರತೆ ಇದ್ದು, ಒಂದು ಕೋಟಿ ಲಸಿಕೆಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಈ ಹಿನ್ನಲೆ ಲಸಿಕೆ ವಿತರಣೆ ಕಾರ್ಯ ವಿಳಂಬ ವಾಗಲಿದೆ. ಇನ್ನು ಈ ಕುರಿತು ಇಂದು ಮಾತನಾಡಿರುವ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು, ನಾಳೆಯಿಂದ ಲಸಿಕೆ ಹಾಕಬೇಕಿತ್ತು. ಲಸಿಕೆ ಇನ್ನು ಬಂದಿಲ್ಲ. ಬಂದ ತಕ್ಷಣ ಕೊಡುತ್ತೇವೆ ಎಂದಿದ್ದಾರೆ.

ಲಸಿಕೆ ವಿಳಂಬವಾಗಿದೆ ಎನ್ನುವ ಮಾತ್ರಕ್ಕೆ ವೈಫಲ್ಯ ಎನ್ನುವ ಪ್ರಶ್ನೆ ಬರುವುದಿಲ್ಲ. ಲಸಿಕೆ ಬಂದ ತಕ್ಷಣ 18 -45 ವರ್ಷ ಒಳಗಿನವರಿಗೆ ಕೊಡಲಾಗುವುದು. ಈ ವಿಚಾರದಲ್ಲಿ ಪ್ರಧಾನಿ ಅವರನ್ನ ಮಧ್ಯೆ ತರಬೇಡಿ. ಕೇಂದ್ರ ಸರ್ಕಾರ ಲಸಿಕೆ ನೀಡಲು ಎಲ್ಲಾ ಪ್ರಯತ್ನ ಮಾಡುತ್ತಾ ಇದೆ ಎಂದರು. ರಾಜ್ಯ ಸರ್ಕಾರ 400 ಕೋಟಿ ರೂಪಾಯಿ ಲಸಿಕೆಗಾಗಿ ಕಾಯ್ದಿರಿಸಿದ್ದು, ಸೆರಂ ಸಂಸ್ಥೆಗೆ ಒಂದು ಕೋಟಿ ಲಸಿಕೆ ಪೂರೈಸಲು ಆದೇಶ ನೀಡಿದೆ. ಮಾಹಿತಿ ಪ್ರಕಾರ ಸೆರಂ ಇನ್ಸಿಟ್ಯೂಟ್ ಆಫ್ ಇಂಡಿಯಾ ಪೂರೈಸುವ ಲಸಿಕೆಯನ್ನು ಇನ್ನೂ ಉತ್ಪಾದನೆ ಮಾಡಿಲ್ಲ. ಈ ಹಿನ್ನಲೆ ನಾಳೆಯಿಂದ ಲಸಿಕೆ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಾಗುವುದಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್​ ಈಗಾಗಲೇ ಸ್ಪಷ್ಟಪಡಿಸಿದ್ದಾರೆ

 ಇದೇ ವೇಳೆ ರಾಜಧಾನಿಯಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನಲೆ ನಗರದ ಪ್ರಮುಖ ವಾರ್ಡ್​ಗಳಲ್ಲಿ ಡ್ರೋನ್​ ಮೂಲಕ ಸ್ಯಾನಿಟೈಸೇಷನ್​ ಸಿಂಪಡಣೆಗೆ ಕಾರ್ಯಕ್ಕೆ ಅವರು ಚಾಲನೆ ನೀಡಿದರು. ಸಂಸದ ಪಿಸಿ ಮೋಹನ್​ ಸ್ವಂತಃ ಖರ್ಚಿನಲ್ಲಿ ಚೆನ್ನೈನಿಂದ 3 ಡ್ರೋಣ್​ಗಳನ್ನು ತರಿಸಲಾಗಿದ್ದು, ಈ ಡ್ರೋಣ್​ಗಳ ಮೂಲಕ ನಗರದಲ್ಲಿ ಸ್ಯಾನಿಟೈಸೇಷನ್​ ಸಿಂಪಡಣೆ ಮಾಡಲಾಗುವುದು. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಳೆಯಿಂದ ಏಳೆಂಟು ದಿನಗಳ ಕಾಲ ಒಟ್ಟು ಐದು ಡ್ರೋಣಗಳ ಮೂಲಕ ಸ್ಯಾನಿಟೈಸೇಷನ್​ ಕಾರ್ಯ ನಡೆಯಲಿದೆ. ಈ ಕಾರ್ಯಕ್ಕೆ ಗೃಹ ಕಚೇರಿಯಲ್ಲಿ ಸಿಎಂ ಹಸಿರು ನಿಶಾನೆ ತೋರಿದರು.

ಈ ವೇಳೆ ಮಾತನಾಡಿದ ಅವರು, ಇಡೀ ದೇಶ ಕೊರೋನಾದಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ತಂತ್ರಜ್ಞಾನ ಮೂಲಕ‌ ತುರ್ತಾಗಿ ಕೋವಿಡ್ ಔಷಧಿ ತಲುಪಿಸಲು ಡ್ರೋಣ್ ಗಳು ಕಾರ್ಯಾಚರಣೆ ನಡೆದಿವೆ. ಸುಮಾರು 45 ಕೆಜಿ ಸಾಮಾಗ್ರಿ ತುಂಬಿ ಹಾರುವ ಡ್ರೋಣ್ ಗಳು ನಮ್ಮ ರಾಜ್ಯದಲ್ಲೂ ಸೇವೆ ಕೊಡುತ್ತೀವೆ. ಗರುಡ ಸಂಸ್ಥೆಯವರು ಈ ಡ್ರೋಣ್ ಸೇವೆ ಉಚಿತ ವಾಗಿ ಕೊಡುತ್ತಿದ್ದಾರೆ. ಈ ಮೂಲಕ ಸ್ಯಾನಿಟೈಸಿಂಗ್ ಕಾರ್ಯವನ್ನು ಮಾಡಲಾಗುವುದು

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img