Tuesday, May 18, 2021
Homeಅಂತರ್ ರಾಜ್ಯಮಹಾರಾಷ್ಟ್ರದ ಸ್ಮಶಾನದಲ್ಲಿ ಅರೆಬೆಂದ ಕೊರೊನಾ ಸೋಂಕಿತನ ಶವ ತಿಂದ ಯುವಕ!

ಇದೀಗ ಬಂದ ಸುದ್ದಿ

ಮಹಾರಾಷ್ಟ್ರದ ಸ್ಮಶಾನದಲ್ಲಿ ಅರೆಬೆಂದ ಕೊರೊನಾ ಸೋಂಕಿತನ ಶವ ತಿಂದ ಯುವಕ!

ಮುಂಬೈ : ದೇಶಾದ್ಯಂತ ಕೊರೊನಾ ವೈರಸ್ ಅಬ್ಬರ ಹೆಚ್ಚಳವಾಗುತ್ತಿದ್ದು, ಈ ನಡುವೆ ಮಹಾರಾಷ್ಟ್ರದಲ್ಲಿ ದೇಶವೇ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ.

ಹೌದು, ಸತಾರಾ ಜಿಲ್ಲೆಯ ಕೋಲಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯುವಕನೊಬ್ಬ ಸ್ಮಶಾನದಲ್ಲಿ ಅರೆಬೆಂದ ಕೊರೊನಾ ಸೋಂಕಿತನ ಶವದ ಮಾಂಸವನ್ನು ತಿಂದ ಘಟನೆ ನಡೆದಿದೆ. ಸ್ಮಶಾನದಲ್ಲಿ ಕೊರೊನಾದಿಂದ ಸತ್ತವರ ಶವಗಳನ್ನು ತಿನ್ನುತ್ತಿರುವ ಯುವಕನನ್ನು ನೋಡಿದಾಗ ಸ್ಥಳೀಯರು ಶಾಕ್ ಆಗಿದ್ದಾರೆ.

ಸ್ಥಳೀಯರು ಸ್ವಲ್ಪ ಸಮಯದವರೆಗೆ ನೋಡುತ್ತಿರುವುದು ನಿಜವೇ? ಅಲ್ಲವೆ? ಎಂದು ಹತ್ತಿರ ಹೋಗಿ ನೋಡಿದಾಗ, ಒಬ್ಬ ಯುವಕ ಸ್ಮಶಾನದಲ್ಲಿ ಅರ್ಧ ಸುಟ್ಟ ಕೊರೊನಾ ಹೆಣಗಳನ್ನು ತಿನ್ನುತ್ತಿದ್ದ. ತಕ್ಷಣ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಸುದ್ದಿ ಕೇಳಿ ಪೊಲೀಸರಿಗೂ ಆಘಾತವಾಗಿದೆ. ಬಳಿಕ ಪೊಲೀಸರು ಸದ್ಯ ಆ ವ್ಯಕ್ತಿಯನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸದ್ಯ ಆತ ಮಾನಸಿಕ ಅಸ್ವಸ್ಥ ಎನ್ನಲಾಗಿದ್ದು, ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img