Sunday, May 9, 2021
Homeಅಂತರ್ ರಾಜ್ಯಬಿಹಾರದ ಮುಖ್ಯ ಕಾರ್ಯದರ್ಶಿ ಕೊರೊನಾಗೆ ಬಲಿ!

ಇದೀಗ ಬಂದ ಸುದ್ದಿ

ಬಿಹಾರದ ಮುಖ್ಯ ಕಾರ್ಯದರ್ಶಿ ಕೊರೊನಾಗೆ ಬಲಿ!

ಪಟನಾ: ದೇಶಾದ್ಯಂತ ಕರೊನಾ ಅಬ್ಬರ ಹೆಚ್ಚಾಗಿದ್ದು, ಬಿಹಾರದ ಮುಖ್ಯ ಕಾರ್ಯದರ್ಶಿ ಅರುಣ್​ ಕುಮಾರ್​ ಸಿಂಗ್​ ಶುಕ್ರವಾರದಂದು ಸೋಂಕಿಗೆ ಬಲಿಯಾಗಿದ್ದಾರೆ.

ಹಿರಿಯ ಐಎಎಸ್​ ಅಧಿಕಾರಿಯಾಗಿದ್ದ ಅರುಣ್​ ಕುಮಾರ್​ ಸಿಂಗ್​ ಕಳೆದ ಕೆಲ ದಿನಗಳ ಹಿಂದೆ ಕರೊನಾ ಸೋಂಕಿಗೆ ತುತ್ತಾಗಿದ್ದರು. ಪಟನಾದ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆರೋಗ್ಯ ಹೆಚ್ಚು ಹದಗೆಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಕ್ಯಾಬಿನೆಟ್​ನಲ್ಲಿದ್ದಾಗಲೇ ಮುಖ್ಯಮಂತ್ರಿ ನಿತೀಶ್​ ಕುಮಾರ್​ಗೆ ಈ ವಿಚಾರ ತಿಳಿದಿದ್ದು, ಹಿರಿಯ ಅಧಿಕಾರಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಅರುಣ್​ ಕುಮಾರ್ ಅವರು 1985ರ ಬ್ಯಾಚ್​ನ ಐಎಎಸ್​ ಅಧಿಕಾರಿಯಾಗಿದ್ದರು. 2021ರ ಫೆಬ್ರವರಿಯಲ್ಲಿ ಅವರನ್ನು ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.

ಅರುಣ್​ ಕುಮಾರ್ ಅವರ ಅಂತ್ಯ ಸಂಸ್ಕಾರವನ್ನು ರಾಜ್ಯ ಸರ್ಕಾರದ ಸಕಲ ಗೌರವದೊಂದಿಗೆ ನಡೆಸುವುದಾಗಿ ತಿಳಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img