Tuesday, May 11, 2021
Homeಸುದ್ದಿ ಜಾಲಖ್ಯಾತ ನಿರೂಪಕ ರೋಹಿತ್ ಸರ್ದಾನ ಕೋವಿಡ್ ನಿಂದ ನಿಧನ

ಇದೀಗ ಬಂದ ಸುದ್ದಿ

ಖ್ಯಾತ ನಿರೂಪಕ ರೋಹಿತ್ ಸರ್ದಾನ ಕೋವಿಡ್ ನಿಂದ ನಿಧನ

ಹೊಸದಿಲ್ಲಿ: ಆಜ್‌ ತಕ್‌ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖ್ಯಾತ ಪತ್ರಕರ್ತ ಮತ್ತು ನಿರೂಪಕ ರೋಹಿತ್‌ ಸರ್ದಾನ ಕೋವಿಡ್‌ ಕಾರಣದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಝೀ ನ್ಯೂಸ್‌ ಪ್ರಧಾನ ಸಂಪಾದಕ ಸುಧೀರ್‌ ಚೌಧರಿ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

ಝೀ ಮೀಡಿಯಾದಲ್ಲಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಅವರು ದೇಶದ ಪ್ರಸಕ್ತ ಪರಿಸ್ಥಿತಿಗಳ ಕುರಿತಾದ ಚರ್ಚಾ ಕಾರ್ಯಕ್ರಮ ʼತಾಲ್‌ ತೋಕ್‌ ಕೆʼ ಯನ್ನು ನಿರೂಪಿಸುತ್ತಿದ್ದರು. ಆಜ್‌ ತಕ್‌ ನ್ಯೂಸ್‌ ಚಾನೆಲ್‌ ನಲ್ಲಿ ದಂಗಲ್‌ ಎಂಬ ಕಾರ್ಯಕ್ರಮದಲ್ಲಿ ಅವರು ಜನಪ್ರಿಯತೆ ಗಳಿಸಿದ್ದರು.

ಅವರ ನಿಧನದ ಕುರಿತು ಟ್ವೀಟ್‌ ಮಾಡಿದ ಹಿರಿಯ ಪತ್ರಕರ್ತ ರಾಜ್‌ ದೀಪ್‌ ಸರ್ದೇಸಾಯಿ, “ಸ್ನೇಹಿತರೇ, ಇದೊಂದು ದುಃಖದ ಸುದ್ದಿಯಾಗಿದೆ. ಖ್ಯಾತ ಟಿವಿ ಸುದ್ದಿ ನಿರೂಪಕ ರೋಹಿತ್‌ ಸರ್ದಾನ ಮೃತಪಟ್ಟಿದ್ದಾರೆ. ಬೆಳಗ್ಗೆ ಹೃದಯಾಘಾತವುಂಟಾಗಿ ಅವರು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದೇನೆ” ಎಂದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img