Monday, May 10, 2021
Homeಜಿಲ್ಲೆಕೊಪ್ಪಳಕೊರೋನ ನಿಯಮಗಳ ಅನುಷ್ಠಾನಕ್ಕೆ ಕೊಪ್ಪಳದ ತಹಸೀಲ್ದಾರ್ ಕ್ರಮ

ಇದೀಗ ಬಂದ ಸುದ್ದಿ

ಕೊರೋನ ನಿಯಮಗಳ ಅನುಷ್ಠಾನಕ್ಕೆ ಕೊಪ್ಪಳದ ತಹಸೀಲ್ದಾರ್ ಕ್ರಮ

ಕೊಪ್ಪಳ : ಕೊರೋನ ನಿಯಂತ್ರಣಕ್ಕೆ ಸರ್ಕಾರ ರೂಪಿಸಿರುವ ನಿಯಮಗಳ ಸಮರ್ಪಕ ಅನುಷ್ಠಾನ ಕ್ಕೆ ಕೊಪ್ಪಳ ಜಿಲ್ಲೆಯ ಕುಕನೂರ್ ತಾಲೂಕು ತಹಸೀಲ್ದಾರ್ ಕಿರಣ್ ಕುಮಾರ್ ಅವರು ಮುಂದಾಗಿದ್ದು ಅವರಿಗೆ ಸ್ಥಳೀಯ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ್ ಉತ್ತಮ ಸಾಥ್ ನೀಡಿದರು.

ಪಟ್ಟಣದಲ್ಲಿ ಇಂದು ವಿವಿಧ ವಾರ್ಡ್ ಮತ್ತು ಹಳ್ಳಿಗಳಲ್ಲಿ ಸಂಚರಿಸಿ ಕೋವಿಡ್ ನಿಯಮಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡಿದ್ದು ಕೋವಿಡ್ ನಿಯಮ ಪಾಲನೆ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ.

ಇಂದು ಆಶಾ ನಿನ್ನೆ ಅಂಗನವಾಡಿ ಇಂದು ಕಾರ್ಯಕರ್ತೆಯರ ಮತ್ತೊಂದು ಸಭೆ ನಡೆಸಿದ ತಹಸೀಲ್ದಾರ್ ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಕುಕನೂರ್ ಪಟ್ಟಣ ಹಾಗೂ ಕುಕನೂರ್ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಕೋವಿಡ್ ನಿಯಮಗಳ ಪಾಲನೆ ಬಗ್ಗೆ ನಿಗಾವಹಿಸಲಾಗುತ್ತಿದೆ,ಪ್ರತಿದಿನ ಸರ್ವಲ್ಯಾನ್ಸ್ ಮಾಡಿಸಲು, ಹೊರಗಿನಿಂದ ಬಂದವರಿಗೆ ರಾಂಡೆಮ್ ಟೆಸ್ಟ್ ಮತ್ತು ಆರ್ ಟಿ ಪಿ ಸಿ ಆರ್ ಟೆಸ್ಟ್ ಖಡ್ಡಾಯವಾಗಿ ಮಾಡಿಸಿ ಕರೋನ ನಿಯಂತ್ರಣಕ್ಕೆ ಮುಂದಾಗಲು ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ತಹಸೀಲ್ದಾರ್ ಕಿರಣ್ ಕುಮಾರ್ ಸೂಚಿಸಿದ್ದಾರೆ.

ಕೊರೋನ ಸೊಂಕಿತರು, ಗುಣ ಲಕ್ಷಣ ಹೊಂದಿರುವವರ ಮಾಹಿತಿಯನ್ನು ದಿನವಹಿ ಅಪ್ಡೇಟ್ ಮಾಡಲು ಆಶಾ ಕಾರ್ಯಕರ್ತರಿಗೆ ತಿಳಿಸಿದರು.

ಕುಕನೂರ್ ಪಟ್ಟಣ ಒಂದರಲ್ಲೇ 49 ಕೋವಿಡ್ ಪಾಸಿಟಿಕ್ ಕೇಸ್ ದಾಖಲಾಗಿದ್ದು ಇದರಲ್ಲಿ 7 ಜನ ಪೊಲೀಸ್ ಸಿಬಂದಿಗಳು ಸೇರಿದ್ದಾರೆ, ಅವರೆಲ್ಲರನ್ನು ಹೋಮ್ ಅಸುಲೇಷನ್ ನಲ್ಲಿ ಇದ್ದಾರೆ, ತಾಲೂಕಿನಲ್ಲಿ ಸಾರ್ವಜನಿಕರಿಗೆ ಕೋವಿಡ್ ನಿಯಮಗಳ ಪಾಲನೆ ಬಗ್ಗೆ ತಾಲೂಕು ಆಡಳಿತ ಶ್ರಮಿಸುತ್ತಿದ್ದು ಅದಕ್ಕೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಹಾಗೂ ಸ್ಥಳೀಯ ಪೊಲೀಸ್ ಠಾಣಾ ಸಿಬಂದಿಗಳ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಡೀ ತಾಲೂಕಿನಲ್ಲಿ ಮತ್ತು ಕುಕನೂರ್ ಪಟ್ಟಣ ದಲ್ಲಿ ಕರೋನ ನಿಯಂತ್ರಣಕ್ಕೆ ಪಟ್ಟಣ ಪಂಚಾಯತ್ ಮತ್ತು ತಾಲೂಕು ಆಡಳಿತ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಈರಯ್ಯ ಕುರ್ತಕೋಟಿ

ವಿ ನ್ಯೂಸ್ 24

ಕೊಪ್ಪಳ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img