Monday, May 10, 2021
Homeಸುದ್ದಿ ಜಾಲಮದುವೆ ಮಂಟಪಕ್ಕೆ ದಾಳಿ ಮಾಡಿ ದರ್ಪ ತೋರಿದ್ದ ಡಿಸಿ ಸಸ್ಪೆಂಡ್

ಇದೀಗ ಬಂದ ಸುದ್ದಿ

ಮದುವೆ ಮಂಟಪಕ್ಕೆ ದಾಳಿ ಮಾಡಿ ದರ್ಪ ತೋರಿದ್ದ ಡಿಸಿ ಸಸ್ಪೆಂಡ್

ಅಗರ್ತಲಾ: ಮದುವೆ ಸಮಾರಂಭದ ಸ್ಥಳಕ್ಕೆ ದಾಳಿ ಮಾಡಿ ದರ್ಪದ ವರ್ತನೆ ತೋರಿದ್ದ ಡಿಸ್ಟ್ರಿಕ್ ಮ್ಯಾಜಿಸ್ಟ್ರೇಟ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ತ್ರಿಪುರಾದ ಅಗರ್ತಲಾದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ತೆರಳಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಶೈಲೇಶ್ ಕುಮಾರ ಯಾದವ್ ದರ್ಪದ ವರ್ತನೆ ತೋರಿದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.

ಕೋವಿಡ್ ನಿಯಮ ಉಲ್ಲಂಘಿಸಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ತೆರಳಿದ್ದ ಶೈಲೇಶ್ ಕುಮಾರ್ ಯಾದವ್ ವರನ ಕುತ್ತಿಗೆ ಹಿಡಿದು ತಳ್ಳಿದ್ದಲ್ಲದೇ, ತಾವೇ ನೀಡಿದ್ದ ಅನುಮತಿ ಪತ್ರ ಹರಿದು ಹಾಕಿ ಒರಟಾಗಿ ವರ್ತಿಸಿದ್ದರು. ಮದುವೆ ಮಂಟಪಕ್ಕೆ ದಂಡಿನೊಂದಿಗೆ ದಾಳಿ ನಡೆಸಿ ದರ್ಪ ತೋರಿದ್ದ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಂತರದಲ್ಲಿ ಶೈಲೇಶ್ ಕುಮಾರ್ ಯಾದವ್ ಕ್ಷಮೆಯಾಚಿಸಿದ್ದರು. ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ಘಟನೆ ಬಗ್ಗೆ ವರದಿ ಕೇಳಿದ್ದಾರೆ. ವರದಿಗೆ ಮೊದಲೇ ಅವರನ್ನು ಅಮಾನತು ಮಾಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img