Monday, May 10, 2021
Homeಸುದ್ದಿ ಜಾಲಕೇಂದ್ರ ಸರ್ಕಾರವನ್ನು ಟೀಕಿಸಿದ್ದ ನಟ ಸಿದ್ಧಾರ್ಥ್ ಗೆ ಕೊಲೆ ಬೆದರಿಕೆ

ಇದೀಗ ಬಂದ ಸುದ್ದಿ

ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ನಟ ಸಿದ್ಧಾರ್ಥ್ ಗೆ ಕೊಲೆ ಬೆದರಿಕೆ

ಚನ್ನೈ : ತಮಿಳು ನಟ ಸಿದ್ಧಾರ್ಥ್ ಅವರು ತಮ್ಮ ಫೋನ್ ಸಂಖ್ಯೆ ಸೋರಿಕೆಯಾಗಿದ್ದು, ಈ ಕಾರಣದಿಂದಾಗಿ, ನಾನು ಮತ್ತು ನನ್ನ ಕುಟುಂಬವು ‘ನಿಂದನೆ, ಅತ್ಯಾಚಾರ ಮತ್ತು ಮಾರಣಾಂತಿಕ ಬೆದರಿಕೆಯ ಕರೆಗಳನ್ನು ಸ್ವೀಕರಿಸುತ್ತಿದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ನನ್ನ ನಂಬರ್‌ ಸಾರ್ವಜನಿಕವಾಗಿ ಲೀಕ್‌ ಆಗಲು ಕಾರಣ ತಮಿಳುನಾಡಿನ ಬಿಜೆಪಿಯ ಐಟಿ ಸೆಲ್‌ ಕಾರಣ ಅಂತ ಅವರು ಆರೋಪಿಸಿದ್ದಾರೆ.

ತನ್ನ ಟ್ವಿಟರ್ ಪೋಸ್ಟ್ನಲ್ಲಿ, ಸಿದ್ಧಾರ್ಥ್ ಅವರು ನನ್ನ ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಿದ್ದು ಮತ್ತು ಅವುಗಳನ್ನು ಪೊಲೀಸರಿಗೆ ಹಸ್ತಾಂತರಿಸುತ್ತಿರುವೆ ಅಂತ ಎಂದು ಉಲ್ಲೇಖಿಸಿದ್ದಾರೆ. ಅವರು ಬರೆದಿದ್ದಾರೆ, ‘ನನ್ನ ಫೋನ್ ಸಂಖ್ಯೆಯನ್ನು ಟಿಎನ್ ಬಿಜೆಪಿ ಮತ್ತು ಬಿಜೆಪಿಟ್ನಿಟ್ಸೆಲ್ ಸದಸ್ಯರು ಸೋರಿಕೆ ಮಾಡಿದ್ದಾರೆ. ನನ್ನ ಮತ್ತು ಕುಟುಂಬಕ್ಕೆ 24 ಗಂಟೆಗಳಿಗಿಂತ ಹೆಚ್ಚು ಕಾಲ 500 ಕ್ಕೂ ಹೆಚ್ಚು ಕರೆಗಳು, ಅತ್ಯಾಚಾರ ಮತ್ತು ಮರಣದ ಬೆದರಿಕೆಗಳು ಬಂದಿದ್ದು. ಎಲ್ಲಾ ಸಂಖ್ಯೆಗಳನ್ನು ದಾಖಲಿಸಲಾಗಿದೆ ಅಂಥ ಹೇಳಿದ್ದಾರೆ. ಆಡಳಿತಾರೂಡ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಸಿದ್ಧಾರ್ಥ್ ಧ್ವನಿ ಎತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ನಟ ಕೋವಿಡ್ ಬಿಕ್ಕಟ್ಟು ನಿರ್ವಹಣೆಯ ಬಗ್ಗೆ ಆಡಳಿತ ಪಕ್ಷವನ್ನು ಟೀಕಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img