Tuesday, May 11, 2021
Homeಸುದ್ದಿ ಜಾಲಬಿಯು ನಂಬರ್ ಇಲ್ಲದಿದ್ದರೂ ಆಸ್ಪತ್ರೆಗೆ ದಾಖಲಿಸಲು ಸೂಚನೆ: ಸಚಿವ ವಿ.ಸೋಮಣ್ಣ

ಇದೀಗ ಬಂದ ಸುದ್ದಿ

ಬಿಯು ನಂಬರ್ ಇಲ್ಲದಿದ್ದರೂ ಆಸ್ಪತ್ರೆಗೆ ದಾಖಲಿಸಲು ಸೂಚನೆ: ಸಚಿವ ವಿ.ಸೋಮಣ್ಣ

 ಬೆಂಗಳೂರು(ಏ. 29): ಕೋವಿಡ್ ಪತ್ತೆಗೆ ಇರುವ ಆರ್​ಟಿ-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಮಾತ್ರ ಬಿಯು ನಂಬರ್ ಜನರೇಟ್ ಆಗುತ್ತದೆ. ಬಿಯು ನಂಬರ್ ಇದ್ದರೆ ಮಾತ್ರ ಬಿಬಿಎಂಪಿಯಿಂದ ಆಸ್ಪತ್ರೆಯ ವ್ಯವಸ್ಥೆಗೆ ಪ್ರಯತ್ನ ಆಗುತ್ತದೆ. ಆದರೆ, ಅನೇಕ ಪ್ರಕರಣಗಳಲ್ಲಿ ಆರ್​ಟಿಪಿಸಿಆರ್ ಪರೀಕ್ಷೆಯಿಂದ ಕೋವಿಡ್ ಪತ್ತೆಯಾಗುವುದಿಲ್ಲ. ಇಂಥ ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗಲು ಪರದಾಡಬೇಕಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಲಕ್ಷಲಕ್ಷ ವ್ಯಯಿಸಬೇಕಾದ ಪರಿಸ್ಥಿತಿ ಇದೆ. ಈ ಸಮಸ್ಯೆಯನ್ನು ನೀಗಿಸಲು ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ. ವಸತಿ ಸಚಿವ ಹಾಗೂ ಬಿಬಿಎಂಪಿ ಪೂರ್ವ ವಲಯದ ಉಸ್ತುವಾರಿ ವಿ. ಸೋಮಣ್ಣ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಬಿಯು ನಂಬರ್ ಇಲ್ಲದಿದ್ದರೂ ಅಡ್ಮಿಟ್ ಮಾಡಲು ಸೂಚನೆ ನೀಡಲಾಗಿದೆ ಎಂದಿದ್ಧಾರೆ.

ಉಸಿರಾಟದ ತೊಂದರೆ ಕಾಣಿಸಿಕೊಂಡರೂ ಆರ್​ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗಟಿವ್ ಬರುತ್ತಿದೆ. ಇದರಿಂದ ಬಿಯು ನಂಬರ್ ಬರುತ್ತಿಲ್ಲ. ಇಂಥ ಪ್ರಕರಣಗಳಲ್ಲಿ ರೋಗಿಗಳನ್ನ ದಾಖಲು ಮಾಡಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ ಎಂದು ವಿ ಸೋಮಣ್ಣ ತಿಳಿಸಿದ್ದಾರೆ. ಬಿಬಿಎಂಪಿ ಪೂರ್ವ ವಲಯದ ಏಳು ಕ್ಷೇತ್ರಗಳ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ಕೆಲವೊಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.  

ಈ ಸಭೆಯಲ್ಲಿ 2-3 ತೀರ್ಮಾನಗಳನ್ನ ತೆಗೆದುಕೊಂಡಿದ್ದೇವೆ. ಅಂಬೇಡ್ಕರ್ ಮೆಡಿಕಲ್ ಕಾಲೇಜನ್ನು ಸಂಪೂರ್ಣ ಕೋವಿಡ್ ಸೆಂಟರ್ ಮಾಡಲಿದ್ದೇವೆ. ಇಲ್ಲಿ 400 ಬೆಡ್​ಗಳಿವೆ. 150 ಆಕ್ಸಿಜನ್ ಬೆಡ್​ಗಳನ್ನ ಹಾಕುತ್ತಿದ್ದೇವೆ. ಪುಲಿಕೇಶಿ ಮತ್ತು ಸರ್ವಜ್ಞ ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲಾಗುವುದು. ಚರಕ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಹಾಕಲಾಗುವುದು. ಚರಕ ಆಸ್ಪತ್ರೆಯ ಪಕ್ಕದಲ್ಲಿರುವ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ 100 ಬೆಡ್​ಗಳನ್ನ ನೀಡಲಾಗುವುದು. ಶಾಂತಿ ನಗರದಲ್ಲಿ 175 ಬೆಡ್​ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು. ಸಿ.ವಿ. ರಾಮನ್ ನಗರದಲ್ಲಿ 100 ಬೆಡ್ ಹಾಗೂ ಇಂದಿರಾನಗರದಲ್ಲಿ 20-30 ಬೆಡ್​ಗಳಿರುವ ಕೋವಿಡ್ ಕೇಂದ್ರಗಳನ್ನ ಆರಂಭಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.

ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 20 ಜನರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗುವುದು. ಇಂದು ಸಂಜೆಯಿಂದಲೇ ನನ್ನ ಗೋವಿಂದರಾಜನಗರ ಕ್ಷೇತ್ರದಲ್ಲಿ ಈ ಕಾರ್ಯ ಆರಂಭಿಸುತ್ತೇನೆ. ಪ್ರತೀ ಕ್ಷೇತ್ರದಲ್ಲೂ ಶವ ಸಾಗಾಣಿಕೆಗೆ ವಾಹನ ವ್ಯವಸ್ಥೆ ಮಾಡಲಾಗುವುದು. ರೆಮ್​ಡೆಸಿವಿರ್ ಔಷಧದ ಸಮಸ್ಯೆ ಬಗ್ಗೆ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸುತ್ತೇವೆ. ಬೆಡ್, ಮೆಡಿಸಿನ್ ಹಾಗೂ ಅಡ್ಮಿಶನ್ ವ್ಯವಸ್ಥೆಯನ್ನ ಸರಳೀಕರಣ ಮಾಡುತ್ತಿದ್ದೇವೆ ಎಂದು ಬಿಬಿಎಂಪಿ ಪೂರ್ವವಲಯದ ಕೋವಿಡ್ ಉಸ್ತುವಾರಿ ಸಚಿವರೂ ಆದ ಸೋಮಣ್ಣ ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img