Tuesday, May 18, 2021
Homeಸುದ್ದಿ ಜಾಲ18-44 ವಯಸ್ಸಿನವರಿಗೆ ದೆಹಲಿಯಲ್ಲಿ ಲಸಿಕೆ ದಾಸ್ತಾನು ಇಲ್ಲ: ಸಚಿವ ಸತ್ಯೇಂದ್ರ ಜೈನ್

ಇದೀಗ ಬಂದ ಸುದ್ದಿ

18-44 ವಯಸ್ಸಿನವರಿಗೆ ದೆಹಲಿಯಲ್ಲಿ ಲಸಿಕೆ ದಾಸ್ತಾನು ಇಲ್ಲ: ಸಚಿವ ಸತ್ಯೇಂದ್ರ ಜೈನ್

ನವದೆಹಲಿ: ವಯಸ್ಸಿನವರಿಗೆ ಲಸಿಕೆ ನೀಡುವುದಕ್ಕೆ ದೆಹಲಿಯಲ್ಲಿ ಲಸಿಕೆ ಲಭ್ಯತೆ ಇಲ್ಲ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ಲಸಿಕೆ ಪಡೆಯಲು ಈಗಾಗಲೇ ಉತ್ಪಾದಕರಿಗೆ ಆರ್ಡರ್ ಗಳನ್ನು ಕಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

“ಈ ವಯಸ್ಸಿನ ವಿಭಾಗದವರಿಗೆ ಲಸಿಕೆ ನೀಡುವುದಕ್ಕೆ ಅಗತ್ಯ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ತಕ್ಷಣಕ್ಕೆ ನಮ್ಮ ಬಳಿ ಲಸಿಕೆಗಳಿಲ್ಲ. ಲಸಿಕೆ ಪೂರೈಕೆ ಮಾಡುವಂತೆ ಕಂಪನಿಗಳಿಗೆ ಮನವಿ ಮಾಡಿದ್ದೇವೆ” ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ದೆಹಲಿ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ 18 ರ ಮೇಲ್ಪಟ್ಟ ಎಲ್ಲರಿಗೂ ಕೋವಿಡ್-19 ಲಸಿಕೆಯನ್ನು ಉಚಿತವಾಗಿ ನೀಡುವುದಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈಗಾಗಲೇ ಘೋಷಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img