Tuesday, May 18, 2021
Homeಕೋವಿಡ್-19ದೇಶದಾದ್ಯಂತ ಒಂದೇ ದಿನ 3.79 ಲಕ್ಷ ಜನರಿಗೆ ಕೊರೋನಾ, 3576 ಸಾವು..!

ಇದೀಗ ಬಂದ ಸುದ್ದಿ

ದೇಶದಾದ್ಯಂತ ಒಂದೇ ದಿನ 3.79 ಲಕ್ಷ ಜನರಿಗೆ ಕೊರೋನಾ, 3576 ಸಾವು..!

ಬೆಂಗಳೂರು, ಏ.29-ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಅನ್ವಯ ಬುಧವಾರ ಒಂದೇ ದಿನ 3.79 ಲಕ್ಷ ಜನರಿಗೆ ಸೋಂಕಿತರು ಕಂಡುಬಂದಿದ್ದಾರೆ. ಇದೇ ಆವಧಿಯಲ್ಲಿ 3576 ಜನರು ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದ ಈವರಗೆ ಅತಿ ಹೆಚ್ಚು ಸೋಂಕಿನ ದಾಖಲೆ ಇದಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕಿತರು ಕಾಣಿಸಿದೆ. ನಂತರದಲ್ಲಿ ಉತ್ತರ ಪ್ರದೇಶ , ದೆಹಲಿ ಹರಿಯಾಣ ಕರ್ನಾಟಕ ರಾಜ್ಯಗಳು ನಲುಗಿದೆ.

ಸಕ್ರಿಯ ಪ್ರಕರಣದಲ್ಲೂ ಭಾರತ ವಿಶ್ವದಲ್ಲಿ ಮೂರನೆ ಸ್ಥಾನದಲ್ಲಿದೆ. ದೇಶದಲ್ಲಿ ಕೊರೊನಾ ಹಾವಳಿ ಮಿತಿಮೀರಿದ್ದು ಕೇಂದ್ರ ಸರ್ಕಾರ ಯಾವುದೆ ಸಂದರ್ಭದಲ್ಲಿ ಆರೋಗ್ಯ ತುರ್ತು ಪರಿಸ್ಸಿತಿ ಘೋಷಿಸುವ ಸಾಭ್ಯತೆ ಇದೆ.

ಆಕ್ಸಿಜನ್ ಅಭಾವ, ಲಸಿಕೆ,ಔಷಧ ಕೊರತೆ ಕೂಡ ಕೇಳಿಬರುತ್ತಿದೆ. ಆರೋಗ್ಯ ಇಲಾಖೆ ಹಲವು ದಿಟ್ಟ ಕ್ರಮದ ಹೊರತಾಗಿ ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇನ್ನು ಹಲವು ರಾಜ್ಯ ಗಳು ಲಾಕ್‍ಡೌನ್ ಮಾಡುವ ಸಾಧ್ಯತೆ ಕಂಡುಬರುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img