Monday, May 10, 2021
Homeಸುದ್ದಿ ಜಾಲಮತ ಎಣಿಕಾ ಕೇಂದ್ರಕ್ಕೆ ಹೋಗುವ ಅಭ್ಯರ್ಥಿಗೆ ಕೋವಿಡ್ ನೆಗೆಟಿವ್​ ರಿಪೋರ್ಟ್ ಕಡ್ಡಾಯ:‌ ಚುನಾವಣಾ ಆಯೋಗ

ಇದೀಗ ಬಂದ ಸುದ್ದಿ

ಮತ ಎಣಿಕಾ ಕೇಂದ್ರಕ್ಕೆ ಹೋಗುವ ಅಭ್ಯರ್ಥಿಗೆ ಕೋವಿಡ್ ನೆಗೆಟಿವ್​ ರಿಪೋರ್ಟ್ ಕಡ್ಡಾಯ:‌ ಚುನಾವಣಾ ಆಯೋಗ

ಎರಡು ಡೋಸ್​ ಲಸಿಕೆಗಳನ್ನ ಪಡೆಯದ ಹಾಗೂ ಕೊರೊನಾ ನೆಗೆಟಿವ್​ ರಿಪೋರ್ಟ್ ಹೊಂದಿರದ ಅಭ್ಯರ್ಥಿಗಳಿಗೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಇಲ್ಲ ಎಂದು ಚುನಾವಣಾ ಆಯೋಗ ಕೇಳಿದೆ. ಚುನಾವಣಾ ಆಯೋಗ ನಿನ್ನೆಯಷ್ಟೇ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಯಾವುದೇ ವಿಜಯದ ಸಂಭ್ರಮಾಚರಣೆಗೆ ಬ್ರೇಕ್​ ಹೇರಿತ್ತು.

ಇದು ಮಾತ್ರವಲ್ಲದೇ ಮೇ 2ನೇ ತಾರೀಖಿನಿಂದ ಮತ ಕೇಂದ್ರಗಳ ಹೊರಗೆ ಜನರು ಜಮಾಯಿಸೋದಕ್ಕೂ ನಿರ್ಬಂಧ ಹೇರಿದೆ. ಅಭ್ಯರ್ಥಿಗಳು ಹಾಗೂ ಅವರ ಏಜೆಂಟ್​ಗಳು ನೆಗೆಟಿವ್​ ರಿಪೋರ್ಟ್ ಹಾಗೂ ಕೊರೊನಾ ಎರಡೂ ಡೋಸ್​ಗಳನ್ನ ಹೊಂದಿರೋದು ಕಡ್ಡಾಯ ಎಂದು ಹೇಳಿದೆ. ಫಲಿತಾಂಶಕ್ಕೂ ಮೂರು ದಿನಗಳ ಮುಂಚೆ ಏಜೆಂಟ್​ಗಳ ಪಟ್ಟಿಯನ್ನ ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ದೇಶದಲ್ಲಿ ಕೊರೊನಾ ಎರಡನೇ ಅಲೆಗೆ ಕೇಂದ್ರ ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್​ ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿತ್ತು. ದೇಶದಲ್ಲಿ ಕೊರೊನಾ ವೈರಸ್​ ಇರುವಾಗಲೇ ಪಂಚರಾಜ್ಯಗಳ ಚುನಾವಣೆಗಳನ್ನ ನಡೆಸಿ ಬೃಹತ್​ ರ್ಯಾಲಿಗಳಿಗೆ ಅವಕಾಶ ಮಾಡಿಕೊಟ್ಟು ಸೋಂಕು ಹೆಚ್ಚಾಗಲು ಕಾರಣವಾದ ಚುನಾವಣಾ ಆಯೋಗದ ವಿರುದ್ಧ ಕೊಲೆ ಕೇಸ್​ ದಾಖಲಿಸಬಹುದು ಎಂದು ಹೇಳುವ ಮೂಲಕ ತರಾಟೆಗೆ ತೆಗೆದುಕೊಂಡಿತ್ತು. ಮದ್ರಾಸ್​ ಹೈಕೋರ್ಟ್ ಛಾಟಿ ಬಳಿಕ ಚುನಾವಣಾ ಆಯೋಗ ಒಂದೊಂದೆ ನಿರ್ಬಂಧಗಳನ್ನ ವಿಧಿಸುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img