Tuesday, May 11, 2021
Homeಅಂತರ್ ರಾಜ್ಯಅಸ್ಸಾಮ್​ನಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ

ಇದೀಗ ಬಂದ ಸುದ್ದಿ

ಅಸ್ಸಾಮ್​ನಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ

ಗುವಾಹಟಿ(ಏ. 28): ಇಂದು ಬೆಳಗ್ಗೆ ಅಸ್ಸಾಮ್ ರಾಜ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ಇದ್ದ ಭೂಕಂಪ ಅಸ್ಸಾಮ್​ನ ಸೋನಿತ್​ಪುರ್ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 7:51ಕ್ಕೆ ಸಂಭವಿಸಿರುವುದನ್ನು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ (National Center for Siesmology) ಸ್ಪಷ್ಟಪಡಿಸಿದೆ. ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ಮಾಹಿತಿ ಇನ್ನೂ ಬಂದಿಲ್ಲ. ಸೋನಿತ್ ಪುರ್ ಜಿಲ್ಲೆಯ ಧೇಕಿಯಾಜುಲಿ ಪಟ್ಟಣದಿಂದ 12 ಕಿಮೀ ಆಚೆ 28 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತೆನ್ನಲಾಗಿದೆ. ಸೋನಿತ್​ಪುರ್​ನಲ್ಲಿ ಸಂಭವಿಸಿದ ಭೂಕಂಪದ ಅನುಭವ ಗುವಾಹಟಿ ಸೇರಿದಂತೆ ಸಮೀಪದ ಅನೇಕ ಪ್ರದೇಶಗಳಲ್ಲೂ ಆಗಿರುವುದು ತಿಳಿದುಬಂದಿದೆ. ರಾಜಧಾನಿ ಗುವಾಹಟಿ ನಗರದ ಹಲವೆಡೆ ಕಟ್ಟಡಗಳು ನಡುಗಿದೆ. ತಾಜ್ ವಿವಾಂತ ಹೋಟೆಲ್​ನ ಗೋಡೆ ಇತ್ಯಾದಿ ಭಾಗಗಳಿಗೆ ತುಸು ಹಾನಿಯಾಗಿದೆ ಎಂದು ಅಲ್ಲಿನವರು ಹೇಳಿಕೊಂಡಿದ್ದಾರೆ. ಗುವಾಹಟಿ ನಗರವು ಸೋನಿತ್​ಪುರ್​ನಿಂದ 150 ಕಿಮೀ ದೂರದಲ್ಲಿದೆ.

ಇನ್ನು, ಭೂಕಂಪದ ಕೇಂದ್ರಬಿಂದು ಇದ್ದ ಪ್ರದೇಶದಿಂದ 45 ಕಿಮೀ ದೂರದಲ್ಲಿರುವ ತೇಜ್​ಪುರ್ ನಗರದಲ್ಲಿ ಕೆಲ ಕಟ್ಟಡಗಳಿಗೆ ಹಾನಿಯಾಗಿದೆ. ಕಟ್ಟಡ ಅಲುಗಾಡುತ್ತಿದ್ದಂತೆಯೇ ಜನರು ಆತಂಕದಿಂದ ಹೊರಗೋಡಿ ಬಂದಿದ್ದಾರೆ.

ಅಸ್ಸಾಮ್ ರಾಜ್ಯವೂ ಹಿಮಾಲಯ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಈ ಹಿಮಾಲಯ ಪ್ರದೇಶಗಳಲ್ಲಿಲ ದೊಡ್ಡ ಮಟ್ಟದ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ. ಅಸ್ಸಾಮ್​ನಲ್ಲೂ ಈ ಹಿಂದೆ ಹಲವು ಭೂಕಂಪ ಸಂಭವಿಸಿದ್ದಿದೆ. ಇವತ್ತಿನದ್ದು, ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪ ಎನ್ನಲಾಗಿದೆ. 1950ರಲ್ಲಿ ಸಂಭವಿಸಿದ ಭೂಕಂಪಕ್ಕೆ 4,800 ಜನರು ಬಲಿಯಾಗಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img