Tuesday, May 18, 2021
Homeಸುದ್ದಿ ಜಾಲಹುಬ್ಬಳ್ಳಿಯಲ್ಲಿ ಇನ್ಸ್ಪೆಕ್ಟರ್ ಕಾರು ಅಪಘಾತ ಸ್ಥಳದಲ್ಲೇ ಓರ್ವ ಸಾವು

ಇದೀಗ ಬಂದ ಸುದ್ದಿ

ಹುಬ್ಬಳ್ಳಿಯಲ್ಲಿ ಇನ್ಸ್ಪೆಕ್ಟರ್ ಕಾರು ಅಪಘಾತ ಸ್ಥಳದಲ್ಲೇ ಓರ್ವ ಸಾವು

ಹುಬ್ಬಳ್ಳಿ: ವೇಗವಾಗಿ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ರಾಯನಾಳ ಸಮೀಪದ ಬೈಪಾಸ್ ನಲ್ಲಿ ಪಲ್ಟಿಯಾದ ಪರಿಣಾಮ ಬೆಳಗಾವಿ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಗಂಭೀರವಾಗಿ ಗಾಯಗೊಂಡಿದ್ದು, ಸಂಬಂಧಿಯೋರ್ವ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಭಟ್ಕಳದ ಗುಪ್ತವಾರ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಾಬಳೇಶ್ವರ ನಾಯಕ ಅವರೇ ತೀವ್ರವಾಗಿ ಗಾಯಗೊಂಡಿದ್ದು, ಅವರ ಸಂಬಂಧಿಕರೋರ್ವರು ಸಾವಿಗೀಡಾಗಿದ್ದಾರೆ. ಇತ್ತೀಚೆಗೆ ಚುನಾವಣೆ ಸಂಬಂಧವಾಗಿ ನಾಯಕ ಅವರನ್ನ ಬೆಳಗಾವಿಗೆ ವರ್ಗಾವಣೆ ಮಾಡಲಾಗಿತ್ತು.

ಸ್ವೀಪ್ಟ್ ಕಾರಿನಲ್ಲಿ ತಮ್ಮೂರಿನತ್ತ ಹೊರಟ ಸಮಯದಲ್ಲಿ ದುರ್ಘಟನೆ ನಡೆದಿದ್ದು, ಪೊಲೀಸ್ ಇನ್ಸಪೆಕ್ಟರ್ ಅವರನ್ನ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಹುಬ್ಬಳ್ಳಿ-ಧಾರವಾಡ ಕಮೀಷನರೇಟಿನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಆಸ್ಪತ್ರೆಗೆ ತೆರಳಿದ್ದು, ಇನ್ಸಪೆಕ್ಟರ್ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ವೈಧ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img