Tuesday, May 18, 2021
Homeಸುದ್ದಿ ಜಾಲರಾಜ್ಯದಲ್ಲಿ ಒಂದೇ ದಿನ 39 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ಪತ್ತೆ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಒಂದೇ ದಿನ 39 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ಪತ್ತೆ

ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ ಕರೊನಾ ಮಹಾಸ್ಫೋಟ ಕಂಡಿದೆ. ಒಂದೇ ದಿನ 39 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದೆ. ಈವರೆಗಿನ ಏಕದಿನ ಏರಿಕೆಯಲ್ಲಿ ಇದು ದಾಖಲೆಯಾಗಿದೆ.

ಎಂದಿನಂತೆ ಇಂದೂ ಕೂಡ ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣ ದೃಢವಾಗಿದೆ. ಬೆಂಗಳೂರಿನಲ್ಲಿ 22,596, ಮೈಸೂರಿನಲ್ಲಿ 1759, ಕೋಲಾರದಲ್ಲಿ 1194, ತುಮಕೂರಿನಲ್ಲಿ 1174, ಬಳ್ಳಾರಿಯಲ್ಲಿ 1106, ಹಾಸನದಲ್ಲಿ 1001 ಪ್ರಕರಣಗಳು ಕಾಣಿಸಿಕೊಂಡಿವೆ. ಉಳಿದಂತೆ ಹಾವೇರಿ ಹೊರೆತುಪಡಿಸಿ ಬೇರೆಲ್ಲ ಜಿಲ್ಲೆಗಳಲ್ಲಿ ಮೂರಂಕಿಯ ಸಂಖ್ಯೆ ವರದಿಯಾಗಿದೆ. ಹಾವೇರಿಯಲ್ಲಿ 36 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 137 ಸೋಂಕಿತರು ಸೇರಿ 229 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 14,39,822ಕ್ಕೆ ಏರಿಕೆಯಾಗಿದೆ. ಅದರಲ್ಲಿ 10,95,883 ಮಂದಿ ಬಿಡುಗಡೆಯಾಗಿದ್ದು, 3,28,884 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಈವರೆಗೆ ಮೃತರ ಸಂಖ್ಯೆ 15,036ಕ್ಕೆ ಏರಿಕೆಯಾಗಿದೆ. ಬೆಂಗಳೂರು ಒಂದೇ ಜಿಲ್ಲೆಯಲ್ಲಿ ಈವರೆಗೆ 7,10,347 ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ 2,24,152 ಸಕ್ರಿಯ ಪ್ರಕರಣಗಳು ಬಾಕಿಯಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img