Monday, May 10, 2021
Homeಸುದ್ದಿ ಜಾಲಸೂಕ್ತ ಚಿಕಿತ್ಸೆ ಹಾಗೂ ಬೆಡ್ ಸಿಗದೆ ಆಸ್ಪತ್ರೆಯ ಎದುರೇ ನರಳಾಡಿ ಪ್ರಾಣ ಬಿಟ್ಟ ಕೊರೊನಾ ...

ಇದೀಗ ಬಂದ ಸುದ್ದಿ

ಸೂಕ್ತ ಚಿಕಿತ್ಸೆ ಹಾಗೂ ಬೆಡ್ ಸಿಗದೆ ಆಸ್ಪತ್ರೆಯ ಎದುರೇ ನರಳಾಡಿ ಪ್ರಾಣ ಬಿಟ್ಟ ಕೊರೊನಾ ಸೋಂಕಿತ

ಆನೇಕಲ್, 28 : ರಾಜ್ಯದಲ್ಲಿ ಕೊರೊನಾ ಆರ್ಭಟಕ್ಕೆ ಜನರು ಹೈರಾಣಾಗಿ ಹೋಗಿದ್ದು, ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಸೋಂಕಿತರು ನರಳಾಟ ನಡೆಸುತ್ತಿದ್ದಾರೆ. ಅದೇ ರೀತಿ ಸೋಂಕಿತನೋರ್ವನಿಗೆ ಸೂಕ್ತ ಚಿಕಿತ್ಸೆ ಹಾಗೂ ಬೆಡ್ ಸಿಗದೆ ಆಸ್ಪತ್ರೆಯ ಮುಂಭಾಗವೇ ನರಳಾಟ ನಡೆಸಿ ಪ್ರಾಣ ಬಿಟ್ಟಿರುವಂತಹ ಮನಕಲಕುವ ಘಟನೆಯೊಂದು ನಡೆದಿದೆ. ಸೂಕ್ತ ಚಿಕಿತ್ಸೆ ಹಾಗೂ ಬೆಡ್ ಸಿಗದೆ ಸೋಂಕಿತನ ಕುಟುಂಬಸ್ಥರ ಪರದಾಟ.

ಮೃತ ಪಟ್ಟು ಕೆಲ ಗಂಟೆಗಳೇ ಕಳೆದ್ರು ತಲೆ ಕೆಡಿಸಿಕೊಳ್ಳದ ಆಸ್ಪತ್ರೆ ವೈದ್ಯಾಧಿಕಾರಿ.  ಹೌದು ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಗೆ ಬೆಡ್ ಸಿಗದೆ ಆಸ್ಪತ್ರೆಯ ಎದುರೇ ನರಳಾಡಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರು ನಡೆದಿದೆ. ಆನೇಕಲ್ ತಾಲ್ಲೂಕಿನ ಹಾಲ್ದೇನಹಳ್ಳಿ ನಿವಾಸಿ ನಾಗೇಶ್(27) ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಮೃತಪಟ್ಟ ಸೋಂಕಿತನಾಗಿದ್ದಾನೆ.

ಕಳೆದೆರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನಾಗೇಶ್ ಆನೇಕಲ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದಾಗ‌ ಕೊರೊನಾ ಪಾಸಿಟಿವ್ ಇರುವುದು ತಿಳಿದು ಬಂದಿದೆ. ತೀರಾ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಲು ಬಿ.ಯು ನಂಬರ್ ವರದಿ ಬರುವುದು ವಿಳಂಬವಾಗಿದೆ ಹಾಗಾಗಿ ಸೂಕ್ತ ಚಿಕಿತ್ಸೆ ಹಾಗೂ ಬೆಡ್ ಸಿಗದೆ ರೋಗಿ ನರಳಾಟ ನಡೆಸಿದ್ದಾನೆ. ಆಸ್ಪತ್ರೆಯ ಮುಂಭಾಗ ಸುಮಾರು 3 ಗಂಟೆಗೂ ಹೆಚ್ಚುಕಾಲ ಕಾಯ್ದು ಕೊನೆಗೆ ಯಾವುದೇ ಪ್ರಯೋಜನವಾಗದೆ ಉಸಿರಾಟದ ತೊಂದರೆಯಿಂದ ಆನೇಕಲ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗವೇ ನಾಗೇಶ್ ಸಾವನ್ನಪ್ಪಿದ್ದಾನೆ.

 ಇನ್ನೂ ರೋಗಿ ಆಸ್ಪತ್ರೆಯ ಮುಂಭಾಗ ನರಳಾಟ ನಡೆಸುತ್ತಿದ್ರು ಸಹ ಆನೇಕಲ್ ಸಾರ್ವಜನಿಕ ಆಸ್ಪತ್ರೆಯ ಯಾರೊಬ್ಬರೂ ಸಹ ಮಾನವೀಯತೆ ತೋರಿ ಚಿಕಿತ್ಸೆಯನ್ನ ನೀಡುವುದಿರಲಿ ಕನಿಷ್ಠ ಆಸ್ಪತ್ರೆಯ ವೈದ್ಯಾಧಿಕಾರಿ ಡಾಕ್ಟರ್ ನಳಿನಿ ಅವರಿಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ. ಬಳಿಕ ಕೆಲ ಗಂಟೆಗಳ ನಂತರ ಮೃತ ದೇಹವನ್ನು ಸ್ಥಳಾಂತರಿಸಿ ಆಸ್ಪತ್ರೆಯ ಸಿಬ್ಬಂದಿ ಮೃತ ನಾಗೇಶನ ಶವವನ್ನು ಪ್ಯಾಕ್ ಮಾಡಿಕೊಡಲು ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾಯಿಸುವ ಮೂಲಕ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣರಾದರು.

ಸೋಂಕಿತ ವ್ಯಕ್ತಿಯನ್ನು ಹಾಲ್ದೇನಹಳ್ಳಿ ಕೆರೆಯ ಬಳಿ ಅಂತ್ಯಸಂಸ್ಕಾರ ಮಾಡಲು ಗ್ರಾಮ ಪಂಚಾಯತಿ ಸದಸ್ಯ ತಿಮ್ಮರಾಜು ನೇತೃತ್ವದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮರಾಜು, ಚಿಕಿತ್ಸೆ ಸಿಗದೇ ಸೋಂಕಿತ ನರಳಾಡಿ ಸಾವನ್ನಪ್ಪಲು ಅಧಿಕಾರಿಗಳೇ ನೇರ ಕಾರಣ, ಆನೇಕಲ್ ಸರ್ಕಾರಿ ಆಸ್ಪತ್ರೆಯ ಎದುರು ಗಂಟೆಗಟ್ಟಲೆ ಒದ್ದಾಡಿದರು ಸಹ ಆಸ್ಪತ್ರೆಯ ಸಿಬ್ಬಂದಿ ಕನಿಷ್ಠ ಕರುಣೆ ತೋರಿಸುವ ಕೆಲಸ ಮಾಡಿರಲಿಲ್ಲ. ಆನೇಕಲ್ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ನಳಿನಿ ಬೇಜವಾಬ್ದಾರಿಯೇ ಸೋಂಕಿತ ವ್ಯಕ್ತಿಯ ಸಾವಿಗೆ ಕಾರಣ, ತಾಲೂಕಿನಲ್ಲಿ ಆಡಳಿತ ನಡೆಸುತ್ತಿರುವ ತಹಶೀಲ್ದಾರ್ ದಿನೇಶ್ ಹಾಗೂ ತಾಲೂಕು ವೈದ್ಯಾಧಿಕಾರಿಗಳು ಕೊರೊನಾದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ರಾಜ್ಯದಲ್ಲಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಬೆಡ್ ಸಿಗದೆ ಆಸ್ಪತ್ರೆಯ ಎದುರೇ ನರಳಾಡಿ ಪ್ರಾಣ ಬಿಡುವಂತಾಗಿದೆ. ಇನ್ನಾದ್ರು ತಾಲ್ಲೂಕು ಆಡಳಿತ ಹಾಗೂ ಆರೋಗ್ಯಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರ ಕಾದು ನೋಡಬೇಕಿದೆ.

ಅಂಬರೀಶ್

 ವಿ ನ್ಯೂಸ್ 24 ಕನ್ನಡ

ಆನೇಕಲ್.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img