Sunday, May 9, 2021
Homeಸುದ್ದಿ ಜಾಲರಾಜ್ಯದಲ್ಲಿ 14 ದಿನಗಳ 'ಕೊರೋನಾ ಕರ್ಪ್ಯೂ' ಜಾರಿಗೆ ಕ್ಷಣಗಣನೆ : ಏನಿರುತ್ತದೆ.? ಏನಿರೋದಿಲ್ಲ.?

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ 14 ದಿನಗಳ ‘ಕೊರೋನಾ ಕರ್ಪ್ಯೂ’ ಜಾರಿಗೆ ಕ್ಷಣಗಣನೆ : ಏನಿರುತ್ತದೆ.? ಏನಿರೋದಿಲ್ಲ.?

ರಾಜ್ಯದಲ್ಲಿ ಕೊರೋನಾ ಸೋಂಕಿನ 2ನೇ ಅಲೆಯ ಚೈನ್ ಲಿಂಕ್ ಬ್ರೇಕ್ ಗಾಗಿ 14 ದಿನ ಕೊರೋನಾ ಕರ್ಪ್ಯೂ ಜಾರಿಗೊಳಿಸಲಾಗಿದೆ. ಅಗತ್ಯವಸ್ತು ಸೇವೆ ಹೊರತುಪಡಿಸಿ, ಯಾವುದೇ ಸೇವೆ ಲಭ್ಯವಾಗೋದಿಲ್ಲ. ಈ ಮೂಲಕ ಕೊರೋನಾ 2ನೇ ಅಲೆಯ ಅಬ್ಬರಕ್ಕೆ ಬ್ರೇಕ್ ಹಾಕೋದಕ್ಕೆ ಕ್ರಮ ಕೈಗೊಂಡಿದೆ.

ಈ ಕುರಿತಂತೆ ನಿನ್ನೆ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಅಲ್ಲದೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಅವರು ಕೂಡ ಕೊರೋನಾ ಕರ್ಪ್ಯೂ ಮಾರ್ಗಸೂಚಿಗಳನ್ನು ಕೂಡ ಹೊರಡಿಸಿದ್ದರು. ಇಂತಹ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಮೇ.12ರವರೆಗೆ ಜಾರಿಗೊಳಿಸಲಾಗಿರುವಂತ 14 ದಿನಗಳ ಕೊರೋನಾ ಕರ್ಪ್ಯೂ ಸಂದರ್ಭದಲ್ಲಿ ಏನೇನಿದೆ.? ಏನೇನಿಲ್ಲ ಎನ್ನುವ ಬಗ್ಗೆ ಮುಂದೆ ಓದಿ.

ಏನೇನಿದೆ.?

 • ತುರ್ತು ಅಗತ್ಯಗಳಾದ ಆಹಾರ ಧಾನ್ಯ, ಹಣ್ಣು-ಹಾಲು, ಮಾಂಸ, ಮೀನು, ಮಳಿಗೆಗಳು ಪ್ರತಿದಿನ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ತೆರೆದಿರುತ್ತದೆ.
 • ವಿಮಾನ ಹಾಗೂ ರೈಲ್ವೆ ಸೇವೆ ಇರುತ್ತದೆ. ಇವುಗಳ ಟಿಕೆಟ್ ಇದ್ದರೆ ಟ್ಯಾಕ್ಸಿ, ಕ್ಯಾಬ್, ಆಟೋದಲ್ಲಿ ನಿಲ್ದಾಣಕ್ಕೆ ತೆರಳಬಹುದು.
 • ಆನ್ ಲೈನ್ ಕ್ಲಾಸ್ ಹಾಗೂ ನಿಗದಿತ ಪರೀಕ್ಷೆಗಳಿಗೆ ಅಡ್ಡಿಯಿಲ್ಲ.
 • ಹೋಟೆಲ್, ರೆಸ್ಟೋರೆಂಟ್, ಮದ್ಯದ ಅಂಗಡಿಗಳಲ್ಲಿ ಪಾರ್ಸೆಲ್ ಮಾತ್ರ ಲಭ್ಯ
 • ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಕೆಲಸ ಮಾಡೋದಕ್ಕೆ ಅವಕಾಶ
 • ಆಸ್ಪತ್ರೆ, ಕ್ಲಿನಿಕ್, ಲ್ಯಾಬ್, ರಕ್ತನಿಧಿ, ಮೆಡಿಕಲ್ ಶಾಪ್ ತೆರೆದಿರುತ್ತವೆ.
 • ಕೃಷಿ, ಕೃಷಿ ಸಂಬಂಧಿತ ವ್ಯಾಪಾರ, ಮನರೇಗಾ ಚಟುವಟಿಕೆಗಳಿಗೆ ಅವಕಾಶ
 • ಸರಕು ಸಾಗಾಣೆಗೆ ಅವಕಾಶ, ಹೋಂ ಡಿಲಿವರಿಗೆ 24 ಗಂಟೆಯೂ ಲಭ್ಯ
 • ಬ್ಯಾಂಕ್, ವಿಮೆ, ಎಟಿಎಂ ತೆರೆದಿರುತ್ತವೆ
 • ಗಾರ್ಮೆಂಟ್ಸ್ ಹೊರತುಪಡಿಸಿ ಎಲ್ಲಾ ಕೈಗಾರಿಕಾ ಉತ್ಪಾದನಾ ಘಟಕಗಳಿಗೆ ಅವಕಾಶ
 • ಅಸ್ವಸ್ಥರು ಹಾಗೂ ಅವರ ಪೋಷಕರಿಗೆ ಸಂಚರಿಸಲು ಅವಕಾಶ
 • ಎಲ್ಲಾ ನಿರ್ಮಾಣ ಕಾಮಗಾರಿ, ದುರಸ್ತಿ ಕಾಮಗಾರಿಗೆ ಅವಕಾಶ

ಏನೇನಿಲ್ಲ.?

 • ಸಾರ್ವಜನಿಕ, ಖಾಸಗಿ ಬಸ್, ಪ್ರಯಾಣಿಕ ವಾಹನಗಳಿಲ್ಲ
 • ಟ್ಯಾಕ್ಸಿ, ಕ್ಯಾಬ್, ಆಟೋ ಸೇವೆ ಇಲ್ಲ. ( ತುರ್ತು ಮತ್ತು ಅನುಮತಿಸಿದ ಸೇವೆಗೆ ಲಭ್ಯವಿರುತ್ತದೆ)
 • ಬೆಂಗಳೂರು ನಗರದಲ್ಲಿ ಮೆಟ್ರೋ ರೈಲು, ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ ಬಸ್ ಇಲ್ಲ
 • ಶಾಲಾ-ಕಾಲೇಜು, ಕೋಚಿಂಗ್ ಕ್ಲಾಸ್ ಇರೋದಿಲ್ಲ
 • ಸಿನಿಮಾ ಥಿಯೇಟರ್, ಶಾಪಿಂಗ್ ಮಾಲ್, ಜಿಮ್, ಕ್ರೀಡಾ ಮೈದಾನ, ಈಜುಕೊಳ, ಕ್ಲಬ್, ರಂಗಮಂದಿರ, ಸಭಾಂಗಣ ಬಂದ್
 • ಅಂತರಾಜ್ಯ ಹಾಗೂ ಅಂತರ್ ಜಿಲ್ಲಾ ಪ್ರಯಾಣಿಕ ವಾಹನ ಸಂಚಾರ ಇಲ್ಲ
 • ಸಾಮಾಜಿಕ, ರಾಜಕೀಯ, ಮನರಂಜನಾ, ಧಾರ್ಮಿಕ, ಸಾಂಸ್ಥಿತಿಕ ಸಮಾರಂಭ ರದ್ದು
 • ಧಾರ್ಮಿಕ ಕೇಂದ್ರಗಳಿಗೆ ಭಕ್ತರಿಗೆ ಪ್ರವೇಶವಿಲ್ಲ. ನಿತ್ಯ ಪೂಜೆಗೆ ಮಾತ್ರ ಅವಕಾಶ
 • ಜ್ಯುವೆಲ್ಲರ್ಸ್, ಬಟ್ಟೆ ಅಂಗಡಿ, ಎಲೆಕ್ಟ್ರಿಕಲ್ಸ್, ಗೃಹೋಪಯೋಗಿ ವಸ್ತುಗಳ ಮಳಿಗೆಗಳು ಬಂದ್
 • ಮದುವೆಗೆ 50 ಮಂದಿಗೆ, ಅಂತ್ಯಕ್ರಿಯೆಗೆ 5 ಮಂದಿಗೆ ಮಾತ್ರ ಅವಕಾಶ
 • ಮಾನ್ಯತೆ ಪಡೆದ ಗುರುತಿನ ಚೀಟಿ ಇಲ್ಲದಿದ್ದರೆ ಸಂಚಾರಕ್ಕೆ ಅವಕಾಶ ಇಲ್ಲ
 • ತುರ್ತು ಅಗತ್ಯವಿಲ್ಲದ ಐಟಿ ಸಿಬ್ಬಂದಿಗೆ ಕಚೇರಿಯಲ್ಲಿ ಕೆಲಸಕ್ಕೆ ಅವಕಾಶ ಇಲ್ಲ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img