Tuesday, May 18, 2021
Homeಸುದ್ದಿ ಜಾಲಇದು ರಾಜಕಾರಣ ಮಾಡುವ ಸಮಯವೇ?: ಸಿದ್ದು ಗೆ ಸಿ.ಟಿ.ರವಿ ಪ್ರಶ್ನೆ

ಇದೀಗ ಬಂದ ಸುದ್ದಿ

ಇದು ರಾಜಕಾರಣ ಮಾಡುವ ಸಮಯವೇ?: ಸಿದ್ದು ಗೆ ಸಿ.ಟಿ.ರವಿ ಪ್ರಶ್ನೆ

ಚಿಕ್ಕಮಗಳೂರು: ‘ರಾಜ್ಯಪಾಲರು ಸಭೆ ನಡೆಸಲು ಮುಂದಾದರೆ ಅವರಿಗೆ ಸಾಂವಿಧಾನಿಕ ಅಧಿಕಾರ ಇಲ್ಲ ಎನ್ನುತ್ತೀರಿ, ಪ್ರಧಾನಿ ಸಭೆ ಕರೆದರೆ ಅವರೇನು ‘ಹೆಡ್‌ ಮಾಸ್ಟ್ರಾ’ ಎಂದು ಹೇಳುತ್ತೀರಿ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ನಿಮಗೆ ಏನಾಗಿದೆ, ಇದು ರಾಜಕಾರಣ ಮಾಡುವ ಸಮಯವೇ?’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ಕರ್ತವ್ಯ ನಿರ್ವಹಿಸುವ ಸಂದರ್ಭ, ಅಧಿಕಾರ ಚಲಾಯಿಸುವ ಸಂದರ್ಭವಲ್ಲ. ಕೋವಿಡ್‌ ಎರಡನೇ ಅಲೆಯಲ್ಲಿ ಏಪ್ರಿಲ್‌ ಮೊದಲವಾರ ಏಕಾಏಕಿ ಪ್ರಕರಣಗಳ ಸಂಖ್ಯೆ 15 ಪಟ್ಟು ಹೆಚ್ಚಾಗಿದೆ. ಹೀಗಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ವಿರೋಧ ಪಕ್ಷಗಳು ಕೋವಿಡ್‌ ವಿರುದ್ಧ ಹೋರಾಡುತ್ತಿರುವವರ ವಿರುದ್ಧ ಹೋರಾಡುವ ಸಣ್ಣತನ ಪ್ರದರ್ಶಿಸಬಾರದು, ಸಹಕಾರ ನೀಡಬೇಕು’ ಎಂದು ಕೋರಿದರು

‘ವಿರೋಧ ಪಕ್ಷಗಳ ಧನಾತ್ಮಕ ಸಲಹೆಗಳನ್ನು ನೀಡಿದರೆ ಸಕರಾತ್ಮಕವಾಗಿ ಸ್ವೀಕರಿಸುತ್ತೇವೆ. ನಿರ್ವಹಣೆಯಲ್ಲಿ ವೈಫಲ್ಯವಾಗಿದ್ದರೆ ನಂತರ ಬೊಟ್ಟು ಮಾಡಿ ತೊರಿಸಲಿ’ ಎಂದು ಪ್ರತಿಕ್ರಿಯಿಸಿದರು.

‘ಮಾರ್ಚ್‌ನಲ್ಲಿ ರಾಜಕಾರಣಿಗಳು, ಮಾಧ್ಯಮಗಳು ಎಲ್ಲರೂ ಸಿ.ಡಿ ಬಗ್ಗೆ ಚರ್ಚೆ ಮಾಡಿದರೇ ಹೊರತು ಕೋವಿಡ್‌ ಬಗ್ಗೆ ಮುಂಜಾಗ್ರತೆ ವಹಿಸುವ ಕುರಿತು ಯಾರೂ ಚರ್ಚಿಸಿಲ್ಲ. ಎರಡನೇ ಅಲೆ ಹೆಚ್ಚುತ್ತಿದೆ ಸರ್ಕಾರ ನಿಯಂತ್ರಣ ಹೇರಬೇಕು ಎಂದು ಮಾಧ್ಯಮಗಳು, ಪ್ರತಿಪಕ್ಷಗಳು ಸಹಿತ ಯಾರೂ ಒತ್ತಡ ಹೇರುವ ಕೆಲಸ ಮಾಡಲಿಲ್ಲ’ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img