Tuesday, May 18, 2021
Homeಸುದ್ದಿ ಜಾಲ2 ತಿಂಗಳು ಶಂಕುಸ್ಥಾಪನೆ, ಉದ್ಘಾಟನೆ ಇಲ್ಲ: ಸಚಿವ ಆರ್.ಅಶೋಕ್

ಇದೀಗ ಬಂದ ಸುದ್ದಿ

2 ತಿಂಗಳು ಶಂಕುಸ್ಥಾಪನೆ, ಉದ್ಘಾಟನೆ ಇಲ್ಲ: ಸಚಿವ ಆರ್.ಅಶೋಕ್

ಕರೊನಾ ಎರಡನೇ ಅಬ್ಬರದ ಹಿನ್ನೆಲೆಯಲ್ಲಿ 2 ತಿಂಗಳ ಕಾಲ ರಾಜ್ಯದಲ್ಲಿ ಯಾವುದೇ ಶಂಕುಸ್ಥಾಪನೆ, ಗುದ್ದಲಿ ಪೂಜೆ, ಉದ್ಘಾಟನೆ ಮುಂತಾದ ಸರಕಾರಿ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ಇರುವುದಿಲ್ಲ. ನೌಕರರು ಕೂಡ ಕರ್ತವ್ಯದಿಂದ ಹಾಜರಾಗಲು ವಿನಾಯಿತಿ ನೀಡಲಾಗಿದೆ ಎಂದರು.

ಶೇ.50ರಷ್ಟು ಮಾತ್ರ ಸರಕಾರಿ ನೌಕರರು ಮಾತ್ರ ಕರ್ತವ್ಯಕ್ಕೆ ಹಾಜರಾಗಬೇಕು. ರೋಟೆಷನ್ ಪದ್ಧತಿಯಲ್ಲಿ ಕೆಲಸಕ್ಕೆ ಬರಬೇಕು. ವಿಕಲಚೇತನರು. ದೃಷ್ಟಿಹೀನರು ಹಾಗೂ ಗರ್ಭಿಣಿಯರಿಗೆ ಕೆಲಸದಿಂದ ವಿನಾಯಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img