Tuesday, May 11, 2021
Homeಸುದ್ದಿ ಜಾಲರೈಲ್ವೆ ಸಚಿವಾಲಯದ ಅಧೀನ ಸಂಸ್ಥೆ ರೈಟ್ಸ್‌ನಲ್ಲಿ 146 ಅಪ್ರೆಂಟಿಸ್‌ಶಿಪ್​ ತರಬೇತಿಗೆ ಅರ್ಜಿ ಆಹ್ವಾನ

ಇದೀಗ ಬಂದ ಸುದ್ದಿ

ರೈಲ್ವೆ ಸಚಿವಾಲಯದ ಅಧೀನ ಸಂಸ್ಥೆ ರೈಟ್ಸ್‌ನಲ್ಲಿ 146 ಅಪ್ರೆಂಟಿಸ್‌ಶಿಪ್​ ತರಬೇತಿಗೆ ಅರ್ಜಿ ಆಹ್ವಾನ

ರೈಲ್ವೆ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ರೈಲ್​ ಇಂಡಿಯಾ ಟೆಕ್ನಿಕಲ್​ ಆಯಂಡ್​ ಎಕನಾಮಿಕಲ್​ ಸರ್ವೀಸಸ್​ (ರೈಟ್ಸ್​- ಆರ್​ಐಟಿಇಎಸ್​) ಲಿಮಿಟೆಡ್​ ಮಿನಿರತ್ನ ಸಂಸ್ಥೆಗಳಲ್ಲಿ ಒಂದಾಗಿದೆ. ಸಾರಿಗೆ, ಮೂಲ ಸೌಕರ್ಯ ಮತ್ತು ಇತರ ಸಂಬಂಧಿತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಗುರುಗಾಂವ್​ ಟಕದಿಂದ ಅಪ್ರೆಂಟೀಸ್​ ಟ್ರೇನಿ ಹುದ್ದೆಗಳಿಗೆ ಅರ್ಹ ಅಭ್ಯಥಿರ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ 2 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯಥಿರ್ಗಳು ಈ ಮೊದಲು ಅಥವಾ ಪ್ರಸ್ತುತ ಅಪ್ರೆಂಟೀಸ್​ ತರಬೇತಿ ಪಡೆದಿರಬಾರದು ಹಾಗೂ ಒಂದು ವರ್ಷಕ್ಕಿಂತ ಹೆಚ್ಚಿನ ವೃತ್ತಿ ಅನುಭವ ಇರುವವರಿಗೂ ಅವಕಾಶ ಇರುವುದಿಲ್ಲ. ಅಪ್ರೆಂಟೀಸ್​ ತರಬೇತಿಯು 1 ವರ್ಷ ಇರುತ್ತದೆ. ಅಜಿರ್ ಸಲ್ಲಿಸುವ ಅಭ್ಯಥಿರ್ಗಳು ಎನ್​ಎಟಿಎಸ್​/ಎನ್​ಎಪಿಎಸ್​ ವೆಬ್​ಸೈಟ್​ನಲ್ಲಿ ಮೊದಲು ಹೆಸರು ನೋಂದಾಯಿಸಿದ ನಂತರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಅಂಪ್ರೆಂಟೀಸ್​ಗಳ ವಿವರ
* ಗ್ರಾಜುಯೇಟ್​ ಅಪ್ರೆಂಟೀಸ್​ (ಇಂಜಿನಿಯರಿಂಗ್​ ಪದವಿ- 76, ಇಂಜಿನಿಯರಿಂಗ್​ ಪದವೀಧರರಲ್ಲದವರು – 20) – 96
* ಡಿಪ್ಲೊಮಾ ಅಪ್ರೆಂಟೀಸ್​ – 15
* ಟ್ರೇಡ್​ ಅಪ್ರೆಂಟೀಸ್​ – 35

ಎಲ್ಲೆಲ್ಲಿ ನೇಮಕಾತಿ?
ಬೆಂಗಳೂರು, ಸಿಕಂದರಾಬಾದ್​, ರಾಂಚಿ, ಗುರುಗಾಂವ್​, ದೆಹಲಿ, ಕೋಲ್ಕತ್ತಾ, ಮುಂಬೈ, ಅಸ್ಸಾಂ, ರಾಜಸ್ಥಾನ್​

ಶೈಕ್ಷಣಿಕ ಅರ್ಹತೆ: ಗ್ರಾಜುಯೇಟ್​ ಅಪ್ರೆಂಟೀಸ್​ಗೆ ಬಿಇ, ಬಿ.ಟೆಕ್​ ಪದವಿ, ನಾನ್​ ಇಂಜಿನಿಯರಿಂಗ್​ ಪದವೀಧರ ಅಪ್ರೆಂಟೀಸ್​ಗೆ ಬಿಎ/ ಬಿಬಿಎ/ ಬಿಕಾಂ ಪದವಿ, ಡಿಪ್ಲೊಮಾ ಅಪ್ರೆಂಟೀಸ್​ಗೆ ಇಂಜಿನಿಯರಿಂಗ್​ ಡಿಪ್ಲೊಮಾ, ಟ್ರೇಡ್​ ಅಪ್ರೆಂಟೀಸ್​ಗೆ ಐಟಿಐ ಉತ್ತೀರ್ಣರಾಗಿದ್ದು, ಸಾಮಾನ್ಯವರ್ಗ ಹಾಗೂ ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯಥಿರ್ಗಳು ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಉಳಿದ ಅಭ್ಯಥಿರ್ಗಳು ಕನಿಷ್ಠ ಶೇ.50 ಅಂಕ ಪಡೆದಿರಬೇಕು.

ಮೀಸಲಾತಿ: ಸಾಮಾನ್ಯವರ್ಗದ ಅಭ್ಯಥಿರ್ಗಳಿಗೆ 67 ಸ್ಥಾನ, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯಥಿರ್ಗಳಿಗೆ 12, ಎಸ್ಸಿಗೆ 21, ಎಸ್ಟಿಗೆ 9, ಇತರ ಹಿಂದುಳಿದ ವರ್ಗಕ್ಕೆ 37 ಸ್ಥಾನಗಳನ್ನು ಮೀಸಲಿರಿಸಿದ್ದು, ಇದರಲ್ಲಿ 6 ಸ್ಥಾನಗಳನ್ನು ಅಂಗವಿಕಲ ಅಭ್ಯಥಿರ್ಗಳಿಗೆ ಕಾಯ್ದಿರಿಸಲಾಗಿದೆ.

ಸ್ಟೆ$ಪೆಂಡ್​: ಗ್ರಾಜುಯೇಟ್​ ಅಪ್ರಂಟೀಸ್​ಗೆ ಮಾಸಿಕ 14,000 ರೂ., ಡಿಪ್ಲೊಮಾ ಅಪ್ರೆಂಟೀಸ್​ಗೆ ಮಾಸಿಕ 12,000 ರೂ., ಟ್ರೇಡ್​ ಅಪ್ರೆಂಟೀಸ್​ಗೆ ಮಾಸಿಕ 10,000 ರೂ. ಗೌರವಧನ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯಥಿರ್ಗಳ ಪಟ್ಟಿಯನ್ನು ರೈಟ್ಸ್​ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 12.5.2021
ಅಧಿಸೂಚನೆಗೆ: https://bit.ly/3xpX04T
ಮಾಹಿತಿಗೆ: ttps://rites.com

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img