Tuesday, May 11, 2021
Homeಕೋವಿಡ್-19ಉತ್ತರ ಪ್ರದೇಶದಲ್ಲಿ ಆಮ್ಲಜನಕ ಕೊರತೆ: 9 ಕೊರೋನಾ ಸೋಂಕಿತರು ಸಾವು

ಇದೀಗ ಬಂದ ಸುದ್ದಿ

ಉತ್ತರ ಪ್ರದೇಶದಲ್ಲಿ ಆಮ್ಲಜನಕ ಕೊರತೆ: 9 ಕೊರೋನಾ ಸೋಂಕಿತರು ಸಾವು

ಉತ್ತರ ಪ್ರದೇಶ : ದೇಶದೆಲ್ಲೆಡೆ ಕೊರೋನಾ ಸೋಂಕಿನ ಜೊತೆಗೆ ಆಮ್ಲಜನಕ ಕೊರತೆ ಹೆಚ್ಚಾಗಿದ್ದು, ಇದೀಗ ಮೀರತ್ ಜಿಲ್ಲೆಯಲ್ಲಿ ಆಮ್ಲಜನಕದ ಬಿಕ್ಕಟ್ಟು ಹೆಚ್ಚುತ್ತಿದೆ. ಆಮ್ಲಜನಕದ ಕೊರತೆಯಿಂದ ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ ಒಂಬತ್ತು ಜನ ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳಲ್ಲಿ ನಗರದ ವಿವಿಧ ಆಸ್ಪತ್ರೆಯೊಳಗೆ 30 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 22 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರೆ, ಇನ್ನುಳಿದ ಎಂಟು ಜನರು ಕೊರೊನಾ ಶಂಕಿತರಾಗಿದ್ದರು ಎಂದು ವರದಿಯಾಗಿದೆ.

ವೈದ್ಯಕೀಯ ಕಾಲೇಜಿನಲ್ಲಿ 13 ಮತ್ತು ಕೆಎಂಸಿಯಲ್ಲಿ ಒಂಬತ್ತು ಜನ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದರೆ, ಕೆಲವು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img