Monday, May 10, 2021
Homeಸುದ್ದಿ ಜಾಲಕೋಟಿ ನಿರ್ಮಾಪಕ ರಾಮು ಕೊರೊನಾಗೆ ಬಲಿ

ಇದೀಗ ಬಂದ ಸುದ್ದಿ

ಕೋಟಿ ನಿರ್ಮಾಪಕ ರಾಮು ಕೊರೊನಾಗೆ ಬಲಿ

ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕ ಎಂದೇ ಹೆಸರಾದ; ಜನಪ್ರಿಯ ನಟಿ ಮಾಲಾಶ್ರೀ ಅವರ ಪತಿ ರಾಮು ಕೊರೊನಾಗೆ ಬಲಿಯಾಗಿದ್ದಾರೆ.

ಕಳೆದ ಶನಿವಾರ ಕೊವಿಡ್ ನಿಂದಾಗಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಕೊನೆಯುಸಿರೆಳೆದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.

ಕನ್ನಡದಲ್ಲಿ ಅದ್ದೂರಿಯಿಂದ ಕೂಡಿದ ಎ.ಕೆ.47, ಗೋಲಿಬಾರ್, ಸರ್ಕಲ್ ಇನ್ಸ್ ಪೆಕ್ಟರ್ ಹೀಗೆ ಅನೇಕ ಚಿತ್ರಗಳನ್ನು ನಿರ್ಮಿಸಿದ್ದರು. ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ ಬಿಡುಗಡೆಗೆ ಸಿದ್ದವಾಗಿತ್ತು.

ರಾಮು ಸರಳ ಸಜ್ಜನ ವ್ಯಕ್ತಿಯಾಗಿದ್ದರು. ಗಾಂಧಿನಗರದ ನಿರ್ಮಾಪಕರ ಕಚೇರಿಗಳಿಗೆ‌ ಕಾಫಿ ತಿಂಡಿ ತಂದು ಕೊಡುತ್ತಿದ್ದ ಹುಡುಗ ಕೋಟಿ ಕೋಟಿ ಖರ್ಚು ಮಾಡುವ ನಿರ್ಮಾಪಕನಾಗಿ ಬೆಳೆದಿದ್ದು ರೋಚಕ ಸಂಗತಿ. ಒಂದು ಕಾಲದಲ್ಲಿ ಸ್ಟಾರ್ ನಟರಂತೆಯೇ ಮೆರೆದ ಮಾಲಾಶ್ರೀ ಅವರನ್ನು ಮದುವೆಯಾದರು. ಅವರಿಗೆ ಒಂದು ಹೆಣ್ಣು ಒಂದು ಗಂಡು ಮುದ್ದಾದ ಮಕ್ಕಳಿದ್ದಾರೆ.

ರಾಮು ಅಕಾಲಿಕ ನಿಧನಕ್ಕೆ ಇಡೀ ಚಿತ್ರರಂಗ ಶಾಕ್ ಗೆ ಒಳಗಾಗಿದೆ ಮತ್ತು ಕಂಬನಿ ಮಿಡಿದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img