Tuesday, May 18, 2021
Homeಜಿಲ್ಲೆಕೊಪ್ಪಳಕೊಪ್ಪಳದ ಒಂದೇ ಗ್ರಾಮದಲ್ಲಿ 80 ಜನರಿಗೆ ಕೊರೋನಾ ಪಾಸಿಟಿವ್!

ಇದೀಗ ಬಂದ ಸುದ್ದಿ

ಕೊಪ್ಪಳದ ಒಂದೇ ಗ್ರಾಮದಲ್ಲಿ 80 ಜನರಿಗೆ ಕೊರೋನಾ ಪಾಸಿಟಿವ್!

ಕೊಪ್ಪಳ: ಮಹಾಮಾರಿ ಕೊರೋನಾ ಈಗ ಅಬ್ಬರಿಸುತ್ತಿದೆ. ಹಳ್ಳಿ ಹಳ್ಳಿಗಳಲ್ಲಿಯೂ ಕೊರೋನಾ ಹರಡುತ್ತಿದೆ. ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರದೆ ಹಳ್ಳಿಗಳಲ್ಲಿ ಕೊರೋನಾ ಹರಡುತ್ತಿದೆ. ಒಂದೇ ಗ್ರಾಮದಲ್ಲಿ ಈಗ 80 ಪ್ರಕರಣಗಳು ವರದಿಯಾಗಿವೆ. ಇಲ್ಲಿ ಕೊರೋನಾ ತಡೆಗಟ್ಟಲು ಜನರ ಓಡಾಟಕ್ಕೆ ನಿರ್ಬಂಧ ಹಾಕಲಾಗಿದೆ. ಕೊಪ್ಪಳ ತಾಲೂಕಿನ ಕಿನ್ನಾಳ ಗೊಂಬೆಗಳಿಂದಲೇ ಪ್ರಸಿದ್ದಿ ಪಡೆದ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಈಗ ಭಯ ಹುಟ್ಟಿಸುವಂತೆ ಕೊರೋನಾ ಸೋಂಕು ಹರಡುತ್ತಿದೆ. ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮದಲ್ಲಿ ಮದುವೆ ತಯಾರಿ ನಡೆಸಿದ್ದ ಕುಟುಂಬವೊಂದರ ಸ್ವಾಬ್ ಟೆಸ್ಟ್ ಕೊಡಲಾಗಿತ್ತು, ಈ ಸಂದರ್ಭದಲ್ಲಿ ಮೊನ್ನೆ ಮದುವೆ ವಿಜಯಪುರ ಜಿಲ್ಲೆಯ ರಕ್ಕಸಗಿಯಲ್ಲಿ ನಡೆಯಿತು. ಮದುಮಗಳು ಸೇರಿ ಅವರ ಕುಟುಂಬದ ನಾಲ್ಕು ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ಈ ಮಧ್ಯೆ ಗ್ರಾಮದಲ್ಲಿ ಸೋಂಕು ವ್ಯಾಪಕವಾಗಿದೆ ಎಂಬ ಕಾರಣಕ್ಕೆ ಈಗಾಗಲೇ 500 ಜನರ ಗಂಟಲ ದ್ರವ ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ 80 ಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 

ಒಂದೇ ಗ್ರಾಮದಲ್ಲಿ ಇಷ್ಟು ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕಿನ್ನಾಳ ಗ್ರಾಮದಲ್ಲಿ ನಿನ್ನೆಯಿಂದ ಏಪ್ರಿಲ್ 30 ರವರೆಗೆ ಕಲಂ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಮಧ್ಯೆ ಗ್ರಾಮದಲ್ಲಿ ಈಗ ವ್ಯಾಪಕವಾಗಿ ಸೋಂಕು ಹರಡಿದ್ದರಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬಂದ್ ಮಾಡಲಾಗಿದೆ. ಗ್ರಾಮದೊಳಗೆ ಯಾರು ಪ್ರವೇಶಿಸಬಾರದು. ಗ್ರಾಮದಿಂದ ಯಾರು ಹೊರಹೋಗದಂತೆ ರಸ್ತೆಯ ಮೇಲೆ ಮಣ್ಣಿನ ಗುಡ್ಡೆ ಹಾಕಿ ನಿರ್ಬಂಧ ಹಾಕಲಾಗಿದೆ. ಇಡೀ ಗ್ರಾಮದಲ್ಲಿ ಈಗ ಸ್ಯಾನಿಟೈಸರ್ ಮಾಡಿದ್ದು ಸೋಂಕು ತಡೆಗೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ ಎಂದು ಕೊಪ್ಪಳ ಸಹಾಯಕ ಆಯುಕ್ತ ನಾರಾಯಣ ಕನಕರಡ್ಡಿ ತಿಳಿಸಿದ್ದಾರೆ.

ಹೆಚ್ಚಿದ ವಲಸಿಗರ ಸಂಖ್ಯೆ

ಕೊರೋನಾ ಮಹಾಮಾರಿಯೆಂಬ ಎರಡನೆಯ ಅಲೆ ದೇಶಾದ್ಯಂತ ಅಬ್ಬರಿಸುತ್ತಿದೆ. ಈ ಸಂದರ್ಭದಲ್ಲಿ ಸರಕಾರ ಮಂಗಳವಾರ ರಾತ್ರಿಯಿಂದ 14 ದಿನಗಳ ಕಾಲ ಅಘೋಷಿತ ಲಾಕ್ ಡೌನ್ ಘೋಷಣೆ ಮಾಡಿದೆ. ಶಾಲಾ ಕಾಲೇಜು ರಜೆ ನೀಡಲಾಗಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ಬಹುತೇಕ ಕಡೆ ಲಾಕ್​ಡೌನ್ ಎಫೆಕ್ಟ್ ಮಹಾ ವಲಸೆ ಆರಂಭವಾಗಿದೆ. ನಿನ್ನೆ ಯಡಿಯೂರಪ್ಪ ರಾಜ್ಯದಲ್ಲಿ 14 ದಿನ ಬಹುತೇಕ ಎಲ್ಲವೂ ಬಂದ್ ಮಾಡಲಾಗುವುದು ಎಂದು ಘೋಷಿಸಿದ ಬೆನ್ನಲ್ಲಿಯೇ ದುಡಿಯುವ ವರ್ಗಕ್ಕೆ ಆತಂಕ ಆರಂಭವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಈ ದಿನಗಳಲ್ಲಿ ಬಹುತೇಕರು ಬೆಂಗಳೂರು, ಮಂಗಳೂರು, ರತ್ನಗಿರಿ, ಗೋವಾ ಸೇರಿದಂತೆ ಹಲವು ಕಡೆ ದುಡಿಯಲು ಹೋಗುತ್ತಾರೆ. ಹೀಗೆ ಹೋದವರಿಗೆ ಈಗ ಬಿಗ ಶಾಕ್ ಆಗಿದೆ. ಏಕಾಎಕಿಯಾಗಿ ಲಾಕ್ ಡೌನ್ ಮಾಡಿದ್ದರಿಂದ ನಮ್ಮೂರೇ ನಮಗೆ ಒಳ್ಳೆಯದು ಎಂದುಕೊಂಡು ಎದ್ದು ಬಿದ್ದು ಈಗ ತಮ್ಮೂರಿನತ್ತ ವಾಪಸ್ಸಾಗುತ್ತಿದ್ದಾರೆ.

ಸರಕಾರಿ ಬಸ್ ಗಳು, ಖಾಸಗಿ ಬಸ್ಸುಗಳು, ರೈಲಿನ ಮೂಲಕ ಕೊಪ್ಪಳಕ್ಕೆ ಬಂದು ಬಸ್ ಗಳನ್ನು ಹಿಡಿದು ತಮ್ಮ ತಮ್ಮೂರಿಗೆ ಹೋಗುತ್ತಿದ್ದಾರೆ. ಇನ್ನೂ ಶಾಲಾ ಕಾಲೇಜುಗಳಿಗೆ ರಜೆ, ಇಂಜಿನಿಯರಿಂಗ್ ಪರೀಕ್ಷೆಗಳನ್ನು ಸಹ ರದ್ದು ಮಾಡಲಾಗಿದೆ. ಇದರಿಂದಾಗಿ ಇಂದು ಮುಂಜಾನೆಯೇ ಕಾಲೇಜು ವಿದ್ಯಾರ್ಥಿಗಳು ತಮ್ಮ ತಮ್ಮೂರಿಗೆ ಹೋಗುತ್ತಿದ್ದಾರೆ. ಈಗ ನಗರ ಪ್ರದೇಶದಿಂದ ಮಹಾವಲಸೆ ಆರಂಭವಾಗಿದೆ. ಬೆಂಗಳೂರಿನಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಬಹುತೇಕರು ಯಾವುದೇ ಪರೀಕ್ಷೆ ಮಾಡಿಸಿಕೊಂಡಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಹಳ್ಳಿಗಳಲ್ಲಿಯೂ ಕೊರೋನಾ ಮಹಾಮಾರಿ ಇನ್ನು ಹೆಚ್ಚು ಅಬ್ಬರಿಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ಎಚ್ಚರಿಕೆ ವಹಿಸುವುದು ಅವಶ್ಯವಾಗಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img