Tuesday, May 18, 2021
Homeಬೆಂಗಳೂರುಬೆಂಗಳೂರಿನ ಈ 4 ಲ್ಯಾಬ್‌ಗಳಲ್ಲಿ ಕೊವಿಡ್-19 ತಪಾಸಣೆ ರದ್ದು!

ಇದೀಗ ಬಂದ ಸುದ್ದಿ

ಬೆಂಗಳೂರಿನ ಈ 4 ಲ್ಯಾಬ್‌ಗಳಲ್ಲಿ ಕೊವಿಡ್-19 ತಪಾಸಣೆ ರದ್ದು!

 ಬೆಂಗಳೂರು, ಏ.27: ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ ಸಂಖ್ಯೆ ಪ್ರತಿನಿತ್ಯ ಹೊಸ ದಾಖಲೆ ಬರೆಯುತ್ತಿದೆ. ಇದರ ಮಧ್ಯೆ ಕೊವಿಡ್-19 ಸೋಂಕಿನ ತಪಾಸಣೆಯಲ್ಲೂ ಅಕ್ರಮ ಎಸಗುತ್ತಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರಿನ ಕೆಲವು ವೈದ್ಯಕೀಯ ಪ್ರಯೋಗಾಲಯಗಳು ಕೊವಿಡ್-19 ತಪಾಸಣೆ ಬಗ್ಗೆ ವರದಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿಲ್ಲ. ಈ ಹಿನ್ನೆಲೆ ಕೊರೊನಾ ವರದಿ ಪಡೆಯುವಲ್ಲಿ ವಿಳಂಬವಾಗುತ್ತಿದೆ ಎಂಬ ಬಗ್ಗೆ ಬಿಬಿಎಂಪಿಗೆ ಹಲವು ದೂರುಗಳು ಬಂದಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ವೀಕರಿಸಿದ ದೂರುಗಳ ಅನ್ವಯ ಪ್ರಯೋಗಾಲಯಗಳ ಮೇಲೆ ಐಸಿಎಂಆರ್ ಕ್ರಮ ತೆಗೆದುಕೊಂಡಿದೆ. ಕೆಪಿಎಂಇ ರಿಜಿಸ್ಟ್ರೇಷನ್ ಆಫ್ ಮೆಡಲ್ ಲ್ಯಾಬೋರೇಟರಿ ಮತ್ತು ಆರತಿ ಸ್ಕ್ಯಾನ್ ಆಂಡ್ ಲ್ಯಾಬ್, ಆರ್ ವಿ ಮೆಟ್ರೋಪಾಲಿಸ್ ಲ್ಯಾಬೋರೇಟರಿ ಹಾಗೂ ಬಿಜಿಎಸ್ ಗ್ಲೋಬಲ್ ಮೆಡಿಕಲ್ ಕಾಲೇಜ್ ಪ್ರಯೋಗಾಲಯದಲ್ಲಿ ಕೊವಿಡ್-19 ಸೋಂಕು ತಪಾಸಣೆಯ ಅನುಮೋದನೆಯನ್ನು ರದ್ದುಗೊಳಿಸಲಾಗಿದೆ.

48 ಗಂಟೆಗಳಲ್ಲಿ ಉತ್ತರ ನೀಡುವಂತೆ ನೋಟಿಸ್:

ಬೆಂಗಳೂರಿನ ನಾಲ್ಕು ಖಾಸಗಿ ಪ್ರಯೋಗಾಲಯಗಳಲ್ಲಿ ಕೊರೊನಾವೈರಸ್ ಸೋಂಕಿತ ತಪಾಸಣೆ ನಡೆಸುವುದಕ್ಕೆ ಐಸಿಎಂಆರ್ ನೀಡಿದ ಅನುಮೋದನೆಯನ್ನು ರದ್ದುಗೊಳಿಸಲಾಗಿದೆ. ಅಲ್ಲದೇ, ತಪಾಸಣೆ ವರದಿ ನೋಂದಣಿ ಮಾಡದಿರಲು ಕಾರಣವೇನು ಎಂಬುದರ ಬಗ್ಗೆ ಮುಂದಿನ 48 ಗಂಟೆಗಳಲ್ಲಿ ಉತ್ತರ ನೀಡುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img