Monday, May 10, 2021
Homeಅಂತರ್ ರಾಜ್ಯಒಂದೇ ಆಯಂಬುಲೆನ್ಸ್​ನೊಳಗೆ 22 ಕರೊನಾ ಸೋಂಕಿತರ ಹೆಣ!

ಇದೀಗ ಬಂದ ಸುದ್ದಿ

ಒಂದೇ ಆಯಂಬುಲೆನ್ಸ್​ನೊಳಗೆ 22 ಕರೊನಾ ಸೋಂಕಿತರ ಹೆಣ!

ಮುಂಬೈ: ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಪ್ರತಿನಿತ್ಯ ಸಾವಿರಾರು ಸೋಂಕಿತರು ಸಾವನ್ನಪ್ಪುತ್ತಿದ್ದ, ಆ ಶವಗಳ ಅಂತ್ಯಸಂಸ್ಕಾರವೇ ದೊಡ್ಡ ಸವಾಲಾಗಿದೆ. ಅದೇ ಹಿನ್ನೆಲೆಯಲ್ಲಿ ಒಂದೇ ಆಯಂಬುಲೆನ್ಸ್​ ಒಳಗೆ 22 ಕರೊನಾ ಸೋಂಕಿತರ ಶವಗಳನ್ನು ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.

ಬೀಡ್​ ಜಿಲ್ಲೆಯಲ್ಲಿ ಒಂದೇ ಆಯಂಬುಲೆನ್ಸ್​ನಲ್ಲಿ 22 ಸೋಂಕಿತರ ಶವಗಳನ್ನು ತುಂಬಿಸಿ, ಅದನ್ನು ಸ್ಮಶಾನಕ್ಕೆ ಒಯ್ದು ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಘಟನೆ ವೇಳೆ ಪೊಲೀಸರು ಸ್ಥಳದಲ್ಲಿದ್ದರು. ದೃಶ್ಯವನ್ನು ಕೆಲ ಸೋಂಕಿತರ ಸಂಬಂಧಿಗಳು ವಿಡಿಯೋ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಅವರ ಮೊಬೈಲ್​ಗಳನ್ನು ಪೊಲೀಸರು ಕಸಿದಿಟ್ಟುಕೊಂಡಿದ್ದಾರೆ. ಅಂತ್ಯಕ್ರಿಯೆಯಾದ ನಂತರ ಮೊಬೈಲ್​ ವಾಪಾಸು ಮಾಡಿದ್ದಾರೆ ಎಂದು ಘಟನೆಯನ್ನು ಕಣ್ಣಾರೆ ಕಂಡ ಕೆಲವರು ಹೇಳಿದ್ದಾರೆ.

ಆಯಂಬುಲೆನ್ಸ್​ನಲ್ಲಿದ್ದ ಶವಗಳಲ್ಲಿ 14 ಶವಗಳು ಶನಿವಾರ ಸತ್ತವರದ್ದಾಗಿದ್ದರೆ ಇನ್ನುಳಿದ ಶವಗಳು ಭಾನುವಾರ ಸತ್ತವರದ್ದು ಎನ್ನಲಾಗಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆದ್ದ ಜಿಲ್ಲಾಡಳಿತ ಪ್ರಕರಣದ ಬಗ್ಗೆ ತನಿಖೆಗೆ ಮುಂದಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img