Monday, May 10, 2021
Homeಸುದ್ದಿ ಜಾಲವಿಶೇಷ ಆರ್ಥಿಕ ಪ್ಯಾಕೇಜ್ʼ ಘೋಷಣೆ ಮಾಡಿ: ಸರ್ಕಾರಕ್ಕೆ ಡಿಕೆಶಿ ಆಗ್ರಹ

ಇದೀಗ ಬಂದ ಸುದ್ದಿ

ವಿಶೇಷ ಆರ್ಥಿಕ ಪ್ಯಾಕೇಜ್ʼ ಘೋಷಣೆ ಮಾಡಿ: ಸರ್ಕಾರಕ್ಕೆ ಡಿಕೆಶಿ ಆಗ್ರಹ

ಬೆಂಗಳೂರು: ಕೊರೊನಾ ಚೈನ್ ಲಿಂಕ್ ಕಡಿತ ಮಾಡಲು ಮುಖ್ಯಮಂತ್ರಿಗಳು 14 ದಿನಗಳ ಬಿಗಿ ಕ್ರಮ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳ ಈ ಘೋಷಣೆಯಿಂದ ಕಷ್ಟಕ್ಕೆ ಒಳಗಾಗುವರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿ. ಸಂಜೆಯೊಳಗೆ ಹಣಕಾಸಿನ ಪ್ಯಾಕೇಜ್ ಘೊಷಣೆ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಈ ಕುರತು ಮಾತನಾಡಿದ ಡಿಕೆಶಿ, ‘ ಕೊರೊನಾ ಚೈನ್ ಲಿಂಕ್ ಕಡಿತ ಮಾಡಲು ಮುಖ್ಯಮಂತ್ರಿಗಳು 14 ದಿನಗಳ ಬಿಗಿ ಕ್ರಮ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳ ಈ ಘೋಷಣೆಯಿಂದ ಕಷ್ಟಕ್ಕೆ ಒಳಗಾಗುವರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿ. ಸಂಜೆಯೊಳಗೆ ಹಣಕಾಸಿನ ಪ್ಯಾಕೇಜ್ ಘೊಷಣೆ ಮಾಡಿ ಎಂದು ಆಗ್ರಹಿಸಿದರು.

ಇನ್ನು ಮುಖ್ಯಮಂತ್ರಿಗಳು ಯಾವ ಕ್ರಮ ಬೇಕಾದ್ರೂ ತೆಗೆದುಕೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಲಾಕ್‌ಡೌನ್ ಅನ್ನೋ ಪದ ಬಿಟ್ಟು ಬಿಗಿ ಕ್ರಮ ಎಂದಿದ್ದಾರೆ. ಈ ಮೂಲಕ ಕೊರೊನಾ ಪರಿಸ್ಥಿತಿ ಕೈ ಮೀರಿದೆ ಅಂತಾ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಕೊರೊನಾ ಸೋಂಕಿತರ ಹಾಗೂ ಮೃತಪಡುತ್ತಿರುವ ಅಂಕಿ ಅಂಶಗಳಲ್ಲಿ ಸಾಕಷ್ಟು ತಪ್ಪಿದೆ ಎಂದು ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img