Tuesday, May 18, 2021
Homeಬೆಂಗಳೂರು'BMTC ವಜ್ರ ಬಸ್ ಪ್ರಯಾಣಿಕ'ರಿಗೆ ಗುಡ್ ನ್ಯೂಸ್

ಇದೀಗ ಬಂದ ಸುದ್ದಿ

‘BMTC ವಜ್ರ ಬಸ್ ಪ್ರಯಾಣಿಕ’ರಿಗೆ ಗುಡ್ ನ್ಯೂಸ್

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿನ ವಜ್ರ ವಾಹನಗಳಲ್ಲಿ ಸಾಮಾನ್ಯ ಮಾಸಿಕ ಪಾಸಿನೊಂದಿಗೆ ಪ್ರಯಾಣಿಸುವ ಚೀಟಿದರವನ್ನು, ಇದೀಗ ಬಿಎಂಟಿಸಿ ಕಡಿತಗೊಳಿಸಿ ಆದೇಶಿಸಿದೆ. ಈ ಮೂಲಕ ವಜ್ರ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯನ್ನು ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು(ಆ) ಹೊರಡಿಸಿದ್ದು, ಸಾಮಾನ್ಯ ಮಾಸಿಕ ಪಾಸುದಾರರಿಗೆ ಹೆಚ್ಚಿನ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ ವಜ್ರ ವಾಹನಗಳಲ್ಲಿ ಸಾಮಾನ್ಯ ಮಾಸಿಕ ಪಾಸಿನೊಂದಿಗೆ ಪ್ರಯಾಣಿಸುವ ಚೀಟಿ ದರವನ್ನು ಈ ಕೆಳಕಂಡಂತೆ ಪರಿಷ್ಕರಣೆ ಮಾಡಿದ್ದಾರೆ.

ರೂ.1050 ಸಾಮಾನ್ಯ ಮಾಸಿಕ ಪಾಸುದಾರರು ರೂ.35 ಜಿಎಸ್ಟಿ ಹೊರತುಪಡಿಸಿ ಖರೀದಿಸುತ್ತಿದ್ದಂತ ಚೀಟಿದರವನ್ನು ರೂ.25ಕ್ಕೆ ಇಳಿಕೆ ಮಾಡಲಾಗಿದೆ. ರೂ.945 ಹಿರಿಯ ನಾಗರೀಕರ ಸಾಮಾನ್ಯ ಮಾಸಿಕ ಪಾಸುದಾದರು ರೂ.35 ಜಿಎಸ್ಟಿ ಹೊರತುಪಡಿಸಿ ಖರೀದಿಸುತ್ತಿದ್ದಂತ ಚೀಟಿದರವನ್ನು ರೂ.25ಕ್ಕೆ ಇಳಿಕೆ ಮಾಡಲಾಗಿದೆ.

ಮುಂದುವರೆದು, ಮೇಲ್ಕಂಡ ಪಾಸುದಾರರು ಭಾನುವಾರಗಳಂದು ಮಾನ್ಯತಾ ಪಾಸಿನೊಂದಿಗೆ ಉಚಿತವಾಗಿ ಪ್ರಯಾಣಿಸಲು ಕಲ್ಪಿಸಿರುವ ಅವಕಾಶವನ್ನು ಮುಂದುವರೆಸಲಾಗಿದೆ ಎಂಬುದಾಗಿಯೂ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img