Tuesday, May 11, 2021
Homeಸಿನಿಮಾ‘ಮಾನಾಡು' ಒಂದೇ ಟೇಕ್ ಆರು ನಿಮಿಷದ ದೃಶ್ಯ

ಇದೀಗ ಬಂದ ಸುದ್ದಿ

‘ಮಾನಾಡು’ ಒಂದೇ ಟೇಕ್ ಆರು ನಿಮಿಷದ ದೃಶ್ಯ

ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ’ಮಾನಾಡು’ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ.

ಚಿತ್ರದ ಶೀರ್ಷಿಕೆಯನ್ನು ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗಿನಲ್ಲಿ ರವಿತೇಜ ಮತ್ತು ಮಲೆಯಾಳಂನಲ್ಲಿ ಪೃಥ್ವಿರಾಜ್ ಲೋಕಾರ್ಪಣೆ ಮಾಡಿದ್ದರು.

ಸದ್ಯ ಕನ್ನಡದ ‘ರಿವೈಂಡ್’ ಶೀರ್ಷಿಕೆ ಬದಲಾಗಿದ್ದು, ಮುಂದಿನ ದಿನಗಳಲ್ಲಿ ಹೊಸ ಹೆಸರನ್ನು ತಿಳಿಸುವುದಾಗಿ ತಂಡವು ಹೇಳಿಕೊಂಡಿದೆ. ಮೊನ್ನೆ ನಡೆದ ಚಿತ್ರೀಕರಣದಲ್ಲಿ ಆರು ನಿಮಿಷದ ಸಂಭಾಷಣೆಯನ್ನು ಒಂದೇ ಟೇಕ್‌ನಲ್ಲಿ ಮುಗಿಸಿ ಸಿಲಂಬರಸನ್ ಅಚ್ಚರಿ ಮೂಡಿಸಿದ್ದಾರೆ.

ರಾಜಕೀಯ ಕಥಾವಸ್ತು  ಹೊಂದಿರುವ ಚಿತ್ರವನ್ನು ವೆಂಕಟ್‌ಪ್ರಭು ನಿರ್ದೇಶನ ಮಾಡಿದ್ದಾರೆ.  ಯುವನ್‌ಶಂಕರ್‌ರಾಜ, ಸಂಗೀತ ನೀಡುತ್ತಿದ್ದಾರೆ.

ಇನ್ನುಳಿದಂತೆ ಛಾಯಾಗ್ರಹಣ ರಿಚರ್ಡ್.ಎಂ.ನಾಥನ್, ಸಂಕಲನ ಪ್ರವೀಣ್.ಕೆ.ಎಲ್, ಸಾಹಸ ಸ್ವಂಟ್‌ಶಿವ, ನೃತ್ಯ ರಾಜುಸುಂದರಂ ಅವರದಾಗಿದೆ.  ಸುರೇಶ್‌ಕಮತ್‌ಚಿ ಅವರು ’ವಿ ಹೌಸ್ ಪ್ರೊಡಕ್ಷನ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.

ಕಲ್ಯಾಣ ಪ್ರಿಯದರ್ಶನ್ ನಾಯಕಿ. ಮತ್ತೊಂದು ಮುಖ್ಯ ಪಾತ್ರದಲ್ಲಿ ಎಸ್.ಜೆ.ಸೂರ್ಯ ಇದ್ದಾರೆ. ಇವರೊಂದಿಗೆ ವೈ.ಜಿ.ಮಹೇಂದ್ರನ್, ವಾಗಿಚಂದ್ರಶೇಖರ್, ಅಂಜನಕೀರ್ತಿ, ಎಸ್.ಎ.ಚಂದ್ರಶೇಖರ್, ಉದಯ, ಮನೋಜ್.ಕೆ.ಭಾರತಿ, ಪ್ರೇಮ್‌ಗಿಅಮರೆನ್, ಡ್ಯಾನಿಯೆಲ್, ಕರುಣಾಕರನ್ ಮುಂತಾದವರು ನಟಿಸುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img